ಮುಂಬೈ: ಹಿರಿಯ ಬಾಲಿವುಡ್ ನಟ ಸೋಮವಾರ ಸಾಯಂಕಾಲದಂದು ಕೊನೆಯುಸಿರೆಳೆದಿದ್ದಾರೆ.79 ವರ್ಷ ವಯಸ್ಸಿನ ಈ ನಟನ ನಿಧನ ನಿಜಕ್ಕೂ ಇಡಿ ಚಲನಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ.ಅನಾರೋಗ್ಯದ ಹಿನ್ನಲೆಯಲ್ಲಿ ಮುಂಬೈನ ಕೋಕಿಲಾಬೆನ್ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿಯೇ ತಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

1938 ಮಾರ್ಚ್ 18 ರಂದು ಕೊಲ್ಕತಾದಲ್ಲಿ  ಬಾಲಿವುಡ್ನ ಭೀಷ್ಮ ಪೃಥ್ವಿರಾಜ್ ಕಪೂರ್ ರವರ ಮೂರನೆಯ ಮಗನಾಗಿ ಜನಿಸಿದ್ದ ಅವರು ಇಂಗ್ಲೀಷ ನಟಿ ಜೆನ್ನಿಫರ್ ಕೆಂಡಾಲ್ರನ್ನು ವರಿಸಿದ್ದರು. ಇವರಿಗೆ ಕುನಾಲ ಕಪೂರ್ ,ಕರಣ್ ಕಪೂರ್, ಸಂಜನಾ ಕಪೂರ್ ಎನ್ನುವ ಮಕ್ಕಳಿದ್ದಾರೆ. ಸತ್ಯಮ ಶಿವಂ ಸುಂದರಂ, ಜಬ್ ಜಬ್ ಫೂಲ್ ಕಿಲೇ, ದೀವಾರ್, ಸುಹಾಗ್ ನಂತಹ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಸಿನಿರಸಿಕರನ್ನು ರಂಜಿಸಿದ್ದರು. ಭಾರತ ಸರ್ಕಾರ ಸಿನಿಮಾ ರಂಗಕ್ಕೆ ಇವರು ನೀಡಿದ ಸಾಧನೆಯನ್ನು ಗುರಿತಿಸಿ 2011ರಲ್ಲಿ ಪದ್ಮಭೂಷಣ,2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು. 1986ರಲ್ಲಿ  ನ್ಯೂಡೆಲ್ಲಿ ಟೈಮ್ಸ್ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ರಾಷ್ಟ್ರಪ್ರಶಸ್ತಿಯನ್ನು ಅವರು ಪಡೆದಿದ್ದರು.



ಇವರ ನಿಧಾನಕ್ಕೆ ಸಂತಾಪ ಸೂಚಿಸಿರುವ  ಪ್ರಧಾನ ಮಂತ್ರಿ ನರೇಂದ್ರ ಮೋದಿ "ಶಶಿ ಕಪೂರ್ ರವರ ಬಹುಮುಖ ಪ್ರತಿಭೆಯನ್ನು ಸಿನಿಮಾ ಮತ್ತು ರಂಗಭೂಮಿಗಳೆರಡರಲ್ಲಿಯೂ ನೋಡಬಹುದು ಅವರು ತಮ್ಮ ಶ್ರದ್ದೆಯಿಂದಲೇ ಅವುಗಳಲ್ಲಿ ತೊಡಗಿಸಿಕೊಂಡಿದ್ದರು.ಅವರ ಅದ್ಬುತ ನಟನೆ ಎಲ್ಲ ಕಾಲಕ್ಕೂ ಸ್ಮರಿಸಲ್ಪಡುತ್ತದೆ" ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ .