ನವದೆಹಲಿ: Bomb Threat To Delhi Airport - ಆಗಸ್ಟ್ 15 ಕ್ಕಿಂತ ಮುಂಚೆ, ಭಯೋತ್ಪಾದಕ ಸಂಘಟನೆ ಅಲ್ ಖೈದಾ ದೆಹಲಿಯ ಐಜಿಐ ವಿಮಾನ ನಿಲ್ದಾಣವನ್ನು ಅಂದರೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Indira Gandhi International Airport) ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ. ಈ ಹಿನ್ನೆಲೆ ಭದ್ರತಾ ಏಜೆನ್ಸಿಗಳಿಗೆ ಕಟ್ಟೆಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ. ದೆಹಲಿ ಪೊಲೀಸರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ (IGI Airport) ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಪೊಲೀಸರು ಸ್ವೀಕರಿಸಿದ ಇಮೇಲ್‌ನಲ್ಲಿ, ಭಯೋತ್ಪಾದಕ ಸಂಘಟನೆ ಅಲ್ ಖೈದಾ, ಐಜಿಐ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡುವ ಯೋಜನೆಯ ಕುರಿತು ಉಲ್ಲೇಖಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ  ಐಜಿಐ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ತನಿಖೆಯ ನಂತರ, ಈ ಬೆದರಿಕೆ ಅಸಂಬದ್ಧ ಅಥವಾ ನಕಲಿ ಬೆದರಿಕೆ ಸಾಬೀತಾಗಿದೆ ಎಂದು ಹೇಳಿದೆ. ಇದಾದ ಬಳಿಕ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು (BTAC) ವಿಮಾನ ನಿಲ್ದಾಣದಿಂದ ಟರ್ಮಿನೆಟ್ ಮಾಡಲಾಗಿದೆ. "ತನಿಖೆಯಲ್ಲಿ ನಿರ್ದಿಷ್ಟವಾಗಿ ಏನೂ ಕಂಡುಬಂದಿಲ್ಲವಾದರೂ, ಹೆಚ್ಚುವರಿ ಎಚ್ಚರಿಕೆಯನ್ನು ನೀಡಲಾಗಿದೆ ಮತ್ತು ಎಲ್ಲಾ ಭದ್ರತಾ ಕ್ರಮಗಳನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಹೆಚ್ಚಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್


ಈ ಬೆದರಿಕೆ ಇಮೇಲ್ india.212@protonmail.com ನಿಂದ ಬಂದಿದೆ. ಈ ಇಮೇಲ್‌ನ ಸಬ್ಜೆಕ್ಟ್ ಲೈನ್ ನಲ್ಲಿ  "ಅಲ್ ಖೈದಾ ನಾಯಕನಿಂದ ಐಜಿಐ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟದ ಸಂಚು."  ಎಂದು ಬರೆಯಲಾಗಿದೆ. ಇಮೇಲ್ ನಲ್ಲಿ, "ಕರನ್ಬೀರ್ ಸೂರಿ ಅಲಿಯಾಸ್ ಮೊಹಮ್ಮದ್ ಜಲಾಲ್ ಮತ್ತು ಅವರ ಪತ್ನಿ ಶೈಲಿ ಶಾರದಾ ಅಲಿಯಾಸ್ ಹಸೀನಾ ಅವರು ಭಾನುವಾರ ಸಿಂಗಾಪುರದಿಂದ ಭಾರತಕ್ಕೆ ಬರುತ್ತಿದ್ದಾರೆ ಮತ್ತು ಮುಂದಿನ ಒಂದರಿಂದ ಮೂರು ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ಗಳನ್ನು ಇರಿಸಲು ಯೋಜಿಸುತ್ತಿದ್ದಾರೆ." ಬೆದರಿಕೆ ಮೇಲ್ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಎಲ್ಲಾ ಏಜೆನ್ಸಿಗಳನ್ನು ಅಲರ್ಟ್ ಮಾಡಲಾಗಿದೆ. ವಿಮಾನ ನಿಲ್ದಾಣದ ಎಲ್ಲಾ ಟರ್ಮಿನಲ್‌ಗಳಲ್ಲಿ ವಿರೋಧಿ ವಿಧ್ವಂಸಕ ತಪಾಸಣೆಯನ್ನು ಸಹ ಆರಂಭಿಸಲಾಗಿದೆ. ಒಳಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಮತ್ತು ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ.


ಇದನ್ನೂ ಓದಿ-Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್


ಈ ಮೊದಲು ಕೂಡ ಈ ರೀತಿಯ ಬೆದರಿಕೆಯೋಡ್ದುವ ಇ-ಮೇಲ್ ಗಳು ಬಂದಿವೆ. ಪೋಲೀಸಾ ಪ್ರಕಾರ, ಈ ವರ್ಷದ ಮಾರ್ಚ್ 31ರಂದು ಕೂಡ ಇದೇ ರೀತಿಯ ಒಂದು ಇ-ಮೇಲ್ ಬಂದಿತ್ತು ಎನ್ನಲಾಗಿದೆ. ಇದರಲ್ಲಿ ಕರಣ್ ಬೀರ್ ಹಾಗೂ ಶೈಲಿಯನ್ನು ISIS ಮುಖ್ಯಸ್ಥರೆಂದು ಹೇಳಲಾಗಿದೆ.


ಇದನ್ನೂ ಓದಿ-Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ