ಬ್ಯಾಂಕ್ ಹಗರಣ: ಎನ್ಸಿಪಿ ನಾಯಕ ಅಜಿತ್ ಪವಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಬಾಂಬೆ ಹೈಕೋರ್ಟ್ ಸೂಚನೆ
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣ ಪ್ರಕರಣದಲ್ಲಿ ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು 70 ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯೂ) ನಿರ್ದೇಶನ ನೀಡಿದೆ.
ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣ ಪ್ರಕರಣದಲ್ಲಿ ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು 70 ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯೂ) ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ಅವರ ವಿರುದ್ಧ ವಿಶ್ವಾಸಾರ್ಹ ಪುರಾವೆಗಳು ಇವೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಎಸ್ ಸಿ ಧರ್ಮಧಿಕಾರಿ ಮತ್ತು ಎಸ್ ಕೆ ಶಿಂಧೆ ಅವರ ಪೀಠವು ಮುಂದಿನ ಐದು ದಿನಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ಇಒಡಬ್ಲ್ಯೂಗೆ ನಿರ್ದೇಶನ ನೀಡಿತು.ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಲ್ಲದೆ, ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಮತ್ತು ರಾಜ್ಯದ 34 ಜಿಲ್ಲೆಗಳ ಹಲವಾರು ಹಿರಿಯ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಈ ಪ್ರಕರಣದ ಆರೋಪಿಗಳಾಗಿದ್ದಾರೆ.
ನಬಾರ್ಡ್ ಬ್ಯಾಂಕ್ ನಡೆಸಿದ ತನಿಖೆ ಮತ್ತು ಮಹಾರಾಷ್ಟ್ರ ಸಹಕಾರಿ ಸಂಘಗಳ (ಎಂಸಿಎಸ್) ಕಾಯ್ದೆಯಡಿ ಅರೆ-ನ್ಯಾಯಾಂಗ ವಿಚಾರಣಾ ಆಯೋಗವು ಸಲ್ಲಿಸಿದ ಚಾರ್ಜ್‌ಶೀಟ್ ನಲ್ಲಿ ಅಜಿತ್ ಪವಾರ್ ಮತ್ತು ಇತರ ಆರೋಪಿಗಳನ್ನು ದೂಷಿಸಿತು. ಅವರ ನಿರ್ಧಾರ, ನಿಷ್ಕ್ರಿಯತೆಗಳು ಬ್ಯಾಂಕಿಗೆ ನಷ್ಟವನ್ನು ಉಂಟುಮಾಡಿದೆ ಎಂದು ನ್ಯಾಯಾಲಯ ಹೇಳಿದೆ. 2007 ಮತ್ತು 2011 ರ ನಡುವೆ ಎಂಎಸ್‌ಸಿಬಿಗೆ 1,000 ಕೋಟಿ ರೂ.ನಷ್ಟವಾಗಿದೆ ಎನ್ನಲಾಗಿದೆ.
ಸಕ್ಕರೆ ಕಾರ್ಖಾನೆಗಳು ಮತ್ತು ನೂಲುವ ಗಿರಣಿಗಳಿಗೆ ಸಾಲ ವಿತರಣೆಯಲ್ಲಿ ಆರೋಪಿಗಳು ಹಲವಾರು ಬ್ಯಾಂಕಿಂಗ್ ಕಾನೂನುಗಳು ಮತ್ತು ಆರ್‌ಬಿಐ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಅಂತಹ ಸಾಲಗಳನ್ನು ಮರುಪಾವತಿ ಮತ್ತು ಮರುಪಡೆಯುವಿಕೆಗೆ ನಂತರದ ಡೀಫಾಲ್ಟ್ ಎಂದು ನಬಾರ್ಡ್‌ನ ಲೆಕ್ಕಪರಿಶೋಧನಾ ವರದಿಯು ಬಹಿರಂಗಪಡಿಸಿದೆ. ಆ ಸಮಯದಲ್ಲಿ ಅಜಿತ್ ಪವಾರ್ ಅವರು ಬ್ಯಾಂಕಿನ ನಿರ್ದೇಶಕರಾಗಿದ್ದರು.
ಆದರೆ, ಇದುವರೆಗೆ ತನಿಖೆ ವರದಿಗಳ ಹೊರತಾಗಿಯೂ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. 2015 ರಲ್ಲಿ ಸ್ಥಳೀಯ ಕಾರ್ಯಕರ್ತ ಸುರಿಂದರ್ ಅರೋರಾ ಅವರು ಈ ಪ್ರಕರಣದಲ್ಲಿ ಇಒಡಬ್ಲ್ಯೂಗೆ ದೂರು ಸಲ್ಲಿಸಿ ಎಫ್ಐಆರ್ ದಾಖಲಿಸಬೇಕೆಂದು ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಗುರುವಾರದಂದು ಹೈಕೋರ್ಟ್ ಈ ಪ್ರಕರಣದ ಆರೋಪಿಗಳ ವಿರುದ್ಧ ವಿಶ್ವಾಸಾರ್ಹ ಪುರಾವೆಗಳು ಇರುವುದನ್ನು ಪ್ರೈಮಾ ಫೇಸಿ, ನಬಾರ್ಡ್‌ನ ಪರಿಶೀಲನಾ ವರದಿ, ದೂರು ಮತ್ತು ಎಂಸಿಎಸ್ ಕಾಯ್ದೆಯಡಿ ಚಾರ್ಜ್‌ಶೀಟ್ ತೋರಿಸಿದೆ ಎನ್ನಲಾಗಿದೆ.