ದೆಹಲಿ: ಕಳೆದ ಕೆಲವು ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ (LPG) ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ ಸುಮಾರು 125 ರೂಪಾಯಿ ಏರಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಯಾವುದಾದರೊಂದು ರೂಪದಲ್ಲಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಖರೀದಿಸುವಂತಾದರೆ ನಿಟ್ಟುಸಿರು ಬಿಡಬಹುದು. ಕಡಿಮೆ ಬೆಲೆಗೆ ಹೇಗೆ ಎಲ್ ಪಿಜಿ ಬುಕ್ (LPG Booking) ಮಾಡಬಹುದು ಎಂಬುದನ್ನು ನಾವು ಹೇಳುತ್ತೇವೆ. 


COMMERCIAL BREAK
SCROLL TO CONTINUE READING

Paytm ನಲ್ಲಿ ವಿಶೇಷ ಕೊಡುಗೆ :
ನೀವು ಮೊದಲ ಬಾರಿಗೆ ಸಿಲಿಂಡರ್ ಅನ್ನು ಬುಕ್ ಮಾಡುವಾಗ ಡಿಜಿಟಲ್  ಪೇಮೆಂಟ್ ಅಪ್ಲಿಕೇಶನ್ Paytm ನಿಮಗೆ 100 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುತ್ತದೆ. ನೀವು ಪೇಟಿಎಂನಿಂದ ಸಿಲಿಂಡರ್ ಬುಕಿಂಗ್ ಮಾಡಿ ಪಾವತಿಸಿದರೆ 100 ರುಪಾಯಿಗಳ ಕ್ಯಾಶ್ ಬ್ಯಾಕ್ (Cash back)ಸಿಗಲಿದೆ. ಸಿಲಿಂಡರ್ ಬುಕಿಂಗ್‌ಗಾಗಿ Paytm ಕೆಲ ಷರತ್ತುಗಳು ನೀಡಿವೆ.  ಅವುಗಳೆಂದರೆ


ಇದನ್ನೂ ಓದಿ: ಹೀಗೆ ಮಾಡಿದರೆ ಕಡಿಮೆ ಬೆಲೆಗೆ LPG ಸಿಲಿಂಡರ್ ಸಿಗಬಹುದು..!


1. ಕ್ಯಾಶ್‌ಬ್ಯಾಕ್ ಆಫರ್ ಮೊದಲ ಬಾರಿ ಬುಕಿಂಗ್ (Booking) ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. 
2. ಮಾರ್ಚ್ 31 ರವರೆಗೆ ಕೇವಲ ಒಂದು ಸಿಲಿಂಡರ್ (LPG) ಬುಕಿಂಗ್ ಮಾಡಬಹುದು. 
3. ಪಾವತಿಯ ನಂತರ ನೀವು ಪಡೆಯುವ ಸ್ಕ್ರ್ಯಾಚ್ ಕಾರ್ಡ್, ಏಳು ದಿನಗಳಲ್ಲಿ ಸ್ಕ್ರಾಚ್ ಮಾಡಬೇಕಾಗುತ್ತದೆ.   
4.ಸ್ಕ್ರ್ಯಾಚ್ ಕಾರ್ಡ್‌ನಲ್ಲಿ ನೀವು ಪಡೆದಿರುವ  ಹಣ 24 ಗಂಟೆಗಳ ಒಳಗೆ ನಿಮ್ಮ Paytm Wallet ಗೆ  ಬರುತ್ತದೆ.


ಅಮೆಜಾನ್‌ನಲ್ಲಿಯೂ ಕ್ಯಾಶ್‌ಬ್ಯಾಕ್ : 
ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ಗೆ ಅಮೆಜಾನ್ (Amazon)ಕೂಡಾ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಇಂಡೇನ್ ನ ಎಲ್ ಪಿಜಿ ಸಿಲಿಂಡರ್ ಅನ್ನು ಅಮೆಜಾನ್ ನಿಂದ ಮೊದಲ ಬಾರಿಗೆ ಬುಕ್ ಮಾಡಿದರೆ, 50 ರೂಪಾಯಿಗಳ ಕ್ಯಾಶ್ ಬ್ಯಾಕ್ ಸಿಗುತ್ತದೆ. ಇಂಡೇನ್ ಆಯಿಲ್ ಟ್ವೀಟ್ ನಲ್ಲಿ (tweet)ಈ ಮಾಹಿತಿ ನೀಡಿದೆ. 


ಇದನ್ನೂ ಓದಿ: LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?


ಡಿಜಿಟಲ್ ಪಾವತಿ ಉಪಯುಕ್ತವಾಗಿದೆ : 
ಡಿಜಿಟಲ್ ಯುಗದಲ್ಲಿ, ಈಗ ಎಲ್ಲವೂ ಡಿಜಿಟಲ್. ಯಾವುದೇ ಬಿಲ್ ಪಾವತಿಸ ಮಾಡಬೇಕಾದರೂ ಡಿಜಿಟಲ್ (Digital) ಮೊರೆ ಹೋಗುತ್ತಿದ್ದೇವೆ. ಡಿಜಿಟಲ್ ಪೇಮೆಂಟ್ ನಲ್ಲೂ ಅನೇಕ ಪ್ರಯೋಜನಗಳಿವೆ. ಅಮೆಜಾನ್, ಪೇಟಿಎಂ, ಗೂಗಲ್‌ಪೇ (google pay),  ಫೋನ್‌ ಪೆ ಸೇರಿದಂತೆ ಅನೇಕ ಪೇಮೆಂಟ್  ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತಿವೆ. ಡಿಜಿಟಲ್ ಪೇಮೆಂಟ್  ಗಳಲ್ಲಿ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನ ಲಾಭವನ್ನು ಕೂಡಾ ನೀಡಲಾಗುತ್ತಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.