ಚಂಡೀಗಢ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆಗಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನೊಂದೆಡೆ ಇಂದು ಬೆಳಿಗ್ಗೆ ಪಂಜಾಬ್ ಗಡಿಭಾಗದ ಔಟ್ ಪೋಸ್ಟ್ ಪಿರೋಜ್ ಪುರ್ ನಲ್ಲಿ ಪಾಕಿಸ್ತಾನದ ಗೂಢಚಾರನೊಬ್ಬನನ್ನು ಬಂಧಿಸಿರುವ ಬಿಎಸ್ಎಫ್ ಆತನಿಂದ ಪಾಕಿಸ್ತಾನಿ ಸಿಮ್ ಕಾರ್ಡಿನೊಂದಿಗೆ ಮೊಬೈಲ್ ಫೋನ್ ವಶಪಡಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಬಂಧಿತನನ್ನು ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿ ಮೊಹಮ್ಮದ್ ಫಾರೂಖ್ ಅವರ ಮಗ ಮೊಹಮ್ಮದ್ ಶಾರುಖ್ 21 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.


ಮೊಹಮ್ಮದ್ ಶಾರುಖ್ ನಿಂದ ವಶಪಡಿಸಿಕೊಳ್ಳಲಾಗಿರುವ ಸಿಮ್ ಕಾರ್ಡ್ ನಂಬರ್ ಪರಿಶೀಲಿಸಿದಾಗ ಈತ ಪಾಕಿಸ್ತಾನ ಮೂಲದ ಎಂಟು ಶಂಕಿತ ವಾಟ್ಸಪ್ ಗ್ರೂಪ್ ನ ಸದಸ್ಯನಾಗಿರುವುದು ಪತ್ತೆಯಾಗಿತ್ತು. ಇದಲ್ಲದೆ ಆರು ಇತರ ಪಾಕಿಸ್ತಾನ್ ಫೋನ್ ಸಂಖ್ಯೆಗಳನ್ನೂ ಸಹ ಅವರಿಂದ ಪಡೆಯಲಾಗಿದೆ.


ಶಾರುಖ್ ಈಗ ಮಮ್ಡಾಟ್ ಪೊಲೀಸರ ಬಂಧನದಲ್ಲಿದ್ದಾನೆ, ಅವರು ಆತನನ್ನು ತನಿಖೆ ಮಾಡುತ್ತಿದ್ದಾರೆ.