ನವದೆಹಲಿ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಲೋಕಸಭೆ ಚುನಾವಣೆಯಲ್ಲಿ ತಲಾ 38 ಸ್ಥಾನಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಆದರೆ ಈ ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎರಡು ಪಕ್ಷಗಳು ಹೊರಗಿಟ್ಟಿವೆ. ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.ಇನ್ನುಳಿದ ಎರಡು ಸ್ಥಾನಗಳನ್ನು ಮೈತ್ರಿ ಪಕ್ಷಕ್ಕೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ಪಕ್ಷದ ಮಾಯಾವತಿ " ನಮಗೆ ಎಲ್ಲ ವ್ಯತ್ಯಾಸಗಳಿಗಿಂತ ದೇಶ ದೊಡ್ಡದು 1995  ರಲ್ಲಿನ ಗೆಸ್ಟ್ ಹೌಸ್ ಹಗರಣವು ಕೂಡ ಈ ದೇಶದ ಏಳಿಗೆಗಾಗಿ ಶ್ರಮಿಸುವುದಕ್ಕೆ ಅಡ್ಡಿ ಬರುವುದಿಲ್ಲ. ಉತ್ತರ ಪ್ರದೇಶ 80 ಲೋಕಸಭಾ ಸೀಟುಗಳನ್ನು ಹೊಂದಿದೆ, ಒಂದು ವೇಳೆ ಬಿಎಸ್ಪಿ-ಎಸ್ಪಿ ಮೈತ್ರಿಕೂಟವು ಬಹುಮತದಿಂದ ಗೆಲುವನ್ನು ಸಾಧಿಸಿದ್ದೆ ಆದಲ್ಲಿ, ನಾವು ಮುಂಬರುವ ಲೋಕಸಭೆಯಲ್ಲಿ ಬಿಜೆಪಿಗೆ ತಡೆಯೊಡ್ಡಬಹುದು" ಎಂದು ಮಾಯಾವತಿ ಹೇಳಿದರು.


ಈ ಮೈತ್ರಿಕೂಟ ಕೇವಲ ಚುನಾವಣೆಯನ್ನು ಗೆಲ್ಲುವುದಷ್ಟೇ ಉದ್ದೇಶವಲ್ಲ ಬದಲಾಗಿ ಇದು ಸಾಮಾನ್ಯ ಜನರ ದಲಿತ, ಮುಸ್ಲಿಂ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು 


ಕೆಲವು ವರ್ಷಗಳ ಹಿಂದೆ ಎಸ್ಪಿ-ಬಿಎಸ್ಪಿ ಎರಡು  ಮೈತ್ರಿ ಮಾಡಿಕೊಳ್ಳುತ್ತವೆ ಎನ್ನುವುದು ಕನಸಿನ ವಿಚಾರವಾಗಿತ್ತು, ಆದರೆ ಈಗ ಲಕ್ನೋದಲ್ಲಿ ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸುವುದರ ಮೂಲಕ ಉಭಯ ಪಕ್ಷಗಳ ನಾಯಕರು 38-38 ಸ್ಥಾನದ ಸೂತ್ರದ ಅನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ.ಈಗಾಗಲೇ ಮೈತ್ರಿ ಮೂಲಕ ಉಪ ಚುನಾವಣೆಯಲ್ಲಿ ಫುಲ್ಪುರ್,ಗೊರಖ್ಪುರ್ ,ಮತ್ತು  ಖೈರಾನಾದಲ್ಲಿ ಗೆಲುವು ಸಾಧಿಸಿರುವ ಉಭಯ ಪಕ್ಷಗಳು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡುವಲ್ಲಿ ಸಜ್ಜಾಗಿವೆ.