ಮಹಾರಾಷ್ಟ್ರ: ಎಲ್ಲ ಹುಡುಗರು ತಮ್ಮ ಪ್ರಿಯತಮೆಯ ಮನವೊಲಿಸಲು ಏನೆಲ್ಲಾ ಸರ್ಕಸ್ ಮಾಡ್ತಾರೆ ಅಲ್ವಾ? ಜಗಳ ಆಡಿದಾಗ, ಹೇಳಿದ ಸಮಯಕ್ಕೆ ಸರಿಯಾಗಿ ಹೋಗದಿದ್ದಾಗ, ಅಥವಾ ಇನ್ಯಾವುದೋ ಸಮಯದಲ್ಲಿ ಆಕೆಯ ಕ್ಷಮೆ ಕೇಳಿ ಮನವೊಲಿಸಲು ಗಿಫ್ಟ್ ಕೊಡುವುದೋ, ಟ್ರಿಪ್ ಕರೆದುಕೊಂಡು ಹೋಗುವುದೋ ಅಥವಾ ಆಕೆಗೆ ಇಷ್ಟವಾಗುವುದನ್ನು ಕೊಡಿಸುವುದೋ.. ಹೀಗೆ ಸಾಕಷ್ಟು ಸರ್ಕಸ್ ಮಾಡ್ತಾರೆ. ಆದರೆ ಇಲ್ಲೊಬ್ಬ ಇವರೆಲ್ಲರಿಗಿಂತ ಫುಲ್ ಡಿಫರೆಂಟ್, ಹೇಗೆ ಅಂತಿರಾ? ಹಾಗಿದ್ರೆ ಈ ಸುದ್ದಿ ಓದಿ...


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ ಪ್ರದೇಶದ ಯುವಕನೊಬ್ಬ ತನ್ನ ಮುನಿಸಿಕೊಂಡ ಪ್ರಿಯತಮೆಯನ್ನು ಓಲೈಸಲು ಆಕೆಯ ಬಳಿ ವೈಯಕ್ತಿಕವಾಗಿ ಕ್ಷಮೆ ಕೇಳುವ ಬದಲು ಮಹಾರಾಷ್ಟ್ರದ ಹೆದ್ದಾರಿಯುದ್ದಕ್ಕೂ 300 ಹೋರ್ಡಿಂಗ್ ಗಳನ್ನೂ ಹಾಕಿಸಿ ಕ್ಷಮೆ ಕೇಳಿದ್ದಾನೆ. ತನ್ನ ಗೆಳತಿ ಆ ಮಾರ್ಗವಾಗಿ ಬರುತ್ತಾಳೆ ಎಂದು ತಿಳಿದ ಆತ, ತನ್ನ ಗೆಳತಿಯನ್ನು ಕ್ಷಮೆ ಕೇಳಲು 'I am Sorry' ಎಂದು ಬರೆದಿರುವ ಹೋರ್ಡಿಂಗ್ಗಳನ್ನು ಆಕೆಯ ಹೆಸರು ಸಮೇತ ಹಾಕಿಸಿದ್ದಾನೆ. ಇದೀಗ ಈ ಫೋಟೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ. 


ವಾಸ್ತವವಾಗಿ, ಈ ರೀತಿ ಎಲ್ಲಂದರಲ್ಲಿ ಅನುಮತಿ ಇಲ್ಲದೆ ಬ್ಯಾನರ್, ಹೋರ್ಡಿಂಗ್ ಅಳವಡಿಸುವುದು ಕಾನೂನು ಬಾಹಿರ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಮಾಡಿದಂತೆ. ಹಾಗಾಗಿ ಈ ಬಗ್ಗೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.