ಗರ್ಭಿಣಿ ಸಹೋದರಿಯ ತಲೆ ಕತ್ತರಿಸಿ, ಅದರೊಂದಿಗೆ Selfie ಕ್ಲಿಕ್ಕಿಸಿಕೊಂಡ ಯುವಕ!
Boy Beheads Pregnant Sister: ಗರ್ಭಿಣಿ ಸಹೋದರಿಯ ತಲೆ ಕತ್ತರಿಸಿದ ಯುವಕ ಮತ್ತು ಆತನ ತಾಯಿ ಸೆಲ್ಫಿ ಅದರೊಂದಿಗೆ Selfie ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾನುವಾರ ನಡೆದ ಮರ್ಯಾದಾ ಹತ್ಯೆಯ (dishonour killing) ಆರೋಪ ಪ್ರಕರಣದಲ್ಲಿ ಯುವಕನೊಬ್ಬ ತನ್ನ ತಾಯಿಯ ಸಹಾಯದಿಂದ ತನ್ನ 19 ವರ್ಷದ ಸಹೋದರಿಯ ಶಿರಚ್ಛೇದನ (Boy Beheads Pregnant Sister) ಮಾಡಿದ್ದಾನೆ.
ಅಲ್ಲದೆ, ನೆರೆಹೊರೆಯವರ ಮುಂದೆ ಆಕೆಯ ತಲೆಯನ್ನು ಪ್ರದರ್ಶಿಸಿದ್ದಾನೆ. ತುಂಡರಿಸಿದ ತಲೆಯೊಂದಿಗೆ ಬಾಲಕ ಮತ್ತು ಆತನ ತಾಯಿ Selfie ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Omicron ಭೀತಿ ಮಧ್ಯೆಯೇ ತೆಲಂಗಾಣದ 43 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಧೃಢ..!
ಯುವತಿಯ ಪತಿ ಮನೆಯಲ್ಲಿದ್ದ ವೇಳೆಯೇ ಆಕೆಯ ತಾಯಿ ಮತ್ತು ಸಹೋದರ ಕೊಲೆ ಮಾಡಿದ್ದಾರೆ. ಯುವಕ ತನ್ನ ಮಾವನ ಮೇಲೆಯೂ ದಾಳಿ ಮಾಡಲು ಯತ್ನಿಸಿದ್ದಾರೆ. ಆದರೆ ಅವರು ತಪ್ಪಿಸಿಕೊಂಡಿದ್ದಾರೆ.
ಗರ್ಭಿಣಿಯಾಗಿದ್ದ ತನ್ನ ಸಹೋದರಿಯನ್ನು ಕೊಂದ ನಂತರ, ಯುವಕ ಛೇದಿಸಿದ ತಲೆಯನ್ನು ( the severed head) ಮನೆಯ ಹೊರಗೆ ತಂದಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು ನೆರೆಹೊರೆಯವರಿಗೆ ರುಂಡವನ್ನು ತೋರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Kerala Incident: ಕೇರಳದ 27 ವರ್ಷದ ಮಾಡೆಲ್ ಮೇಲೆ ಗ್ಯಾಂಗ್ ರೇಪ್, ಘಟನೆಗೂ ಮುನ್ನ ಹೋಟೆಲ್ ನಲ್ಲಿ ನಡೀತು ಈ ಕೃತ್ಯ
ಯುವತಿಯು ಜೂನ್‌ನಲ್ಲಿ ಓಡಿಹೋಗಿ ಮದುವೆಯಾಗಿದ್ದಳು. ಆಕೆಯ ತಾಯಿ ಕಳೆದ ವಾರ ಆಕೆಯನ್ನು ಸಂಪರ್ಕಿಸಿ ಭೇಟಿಯಾಗುವಂತೆ ಹೇಳಿದ್ದಾರೆ. ಭಾನುವಾರ ಮಗನೊಂದಿಗೆ ಮಗಳ ಮನೆಗೆ ಬಂದಿದ್ದಾರೆ. ಅವರು ಬಂದಾಗ ಪತಿ ಬೇರೆ ಕೋಣೆಯಲ್ಲಿದ್ದರು. ತಾಯಿ ಮತ್ತು ಸಹೋದರನಿಗೆ ಟೀ ಮಾಡುತ್ತಿದ್ದಾಗ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ.
ಆಕೆಯ ತಾಯಿ ಮಗಳ ಕಾಲನ್ನು ಹಿಡಿದುಕೊಂಡಿದ್ದು, ಕುಡುಗೋಲಿನಿಂದ ಆಕೆಯ ಸಹೋದರ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಆರೋಪಿಗಳು ವಿರ್ಗಾಂವ್ ಪೊಲೀಸ್ ಠಾಣೆಯಲ್ಲಿ (Virgoan police station) ಶರಣಾಗಿದ್ದಾರೆ.