ಮಧ್ಯಪ್ರದೇಶ: ಮೊಬೈಲ್ ನಲ್ಲಿ ಆರು ಗಂಟೆ PUBG ಗೇಮ್ ಆಡಿ ಮೃತಪಟ್ಟ ಬಾಲಕ
ಮಧ್ಯಪ್ರದೇಶದಲ್ಲಿ ಆರು ಗಂಟೆಗಳ ಕಾಲ ಮೊಬೈಲ್ ಫೋನ್ ನಲ್ಲಿ PUBG ಗೇಮ್ ಆಟ ಆಡುತ್ತಿರುವಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಅವರ ತಂದೆ ಶುಕ್ರವಾರ ತಿಳಿಸಿದ್ದಾರೆ.
ನವದೆಹಲಿ: ಮಧ್ಯಪ್ರದೇಶದಲ್ಲಿ ಆರು ಗಂಟೆಗಳ ಕಾಲ ಮೊಬೈಲ್ ಫೋನ್ ನಲ್ಲಿ PUBG ಗೇಮ್ ಆಟ ಆಡುತ್ತಿರುವಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಅವರ ತಂದೆ ಶುಕ್ರವಾರ ತಿಳಿಸಿದ್ದಾರೆ.
ಈಗ ಮೃತಪಟ್ಟಿರುವ ಬಾಲಕನನ್ನು ಫರ್ಕಾನ್ ಖುರೇಷಿ ಎಂದು ಗುರುತಿಸಲಾಗಿದ್ದು,12 ನೇ ತರಗತಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.ಫರ್ಕಾನ್ ಖುರೇಷಿ ಮತ್ತು ಅವರ ಕುಟುಂಬ ರಾಜಸ್ಥಾನದ ನಸಿರಾಬಾದ್ನಲ್ಲಿದ್ದಾಗ ನಡೆದಿದೆ ಎನ್ನಲಾಗಿದೆ. ಮದುವೆಗಾಗಿ ನೀಮಚ್ಗೆ ಆ ಬಾಲಕ ಬಂದಿದ್ದ ಎಂದು ತಂದೆ ಹರೂನ್ ರಶೀದ್ ಖುರೇಷಿ ತಿಳಿಸಿದ್ದಾರೆ.
ಆ ಮೃತ ಬಾಲಕ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡದ ಕಾರಣ ಅವು ತನಿಖೆ ನಡೆಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಫೊರ್ಕಾನ್ ಖುರೇಷಿ ಆನ್ಲೈನ್ ಆಟ ಆಡುತ್ತಿದ್ದಾಗ, ಅದನ್ನು ಸ್ಫೋಟಿಸಿ ಎಂದು ಕೂಗುತ್ತಿದ್ದ ಎಂದು ಬಾಲಕನ ತಂದೆ ಹೇಳಿದ್ದಾರೆ.