ನವದೆಹಲಿ: 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನು ತನ್ನ ಗೆಳತಿಯ ಜೊತೆ ವಾಟ್ಸಪ್  ವೀಡಿಯೊ ಕರೆಯಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಸ್ವಯಂ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ  ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

 ಆ ಯುವಕನನ್ನು ಆಕಾಶ ಕುಮಾರ್ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಬೀರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸೈಚಕ್ನಲ್ಲಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.  ಆತನ ನಿವಾಸದ ಹಾಸಿಗೆಯಲ್ಲೇ ಮೃತದೇಹದ ಜೊತೆಗೆ ಪಿಸ್ತೂಲ್ ಸಿಕ್ಕಿರುವುದು ಇದನ್ನು ಇನ್ನಷ್ಟು ಪುಷ್ಟಿಕರಿಸಿದೆ.


ಈ ಪ್ರಕರಣದ ಬಗ್ಗೆ ಎಎನ್ಐ ಗೆ ಪ್ರತಿಕ್ರಿಯಿಸಿರುವ ಎಸ್ಎಸ್ಪಿ ಮನು ಮಹಾರಾಜ್, "ತನ್ನ ಗೆಳತಿಯೊಂದಿಗೆ ವೀಡಿಯೊ ಕರೆ ಸಮಯದಲ್ಲಿ ಬಂಟಿ ಎಂಬ ಈ ಹುಡುಗ ತನ್ನನ್ನು ತಾನೇ ಗುಂಡು ಹಾರಿಸಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಬೀರ್ ಸ್ಥಳೀಯ ನಿವಾಸಿಗಳೋಬ್ಬರ ಹೇಳುವಂತೆ ಈ ಘಟನೆಯು ಸುಮಾರು 2-3 ಗಂಟೆಗೆ ಸಂಭವಿಸಿರಬಹುದೆಂದು ಹೇಳಿದ್ದಾರೆ.ಆದರೆ ಈ ಘಟನೆ ಬೆಳಗ್ಗೆ ಸುಮಾರು 8 ಗಂಟೆಗೆ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.


ಸುದ್ದಿಮೂಲಗಳ ಪ್ರಕಾರ, ಆ ಹುಡುಗನು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ ಎಂದು ತಿಳಿದುಬಂದಿದ್ದು ಆದ್ದರಿಂದ  ಅವನ ಕುಟುಂಬದ ಸದಸ್ಯರು ತನ್ನ ಗರ್ಲ್ ಫ್ರೆಂಡ್ ಜೊತೆಗಿನ ಸಂಬಂಧವನ್ನು  ಕೊನೆಗೊಳಿಸುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸಧ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.