ಭುವನೇಶ್ವರ: ಒಡಿಶಾ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ನಡೆಸಲಾಯಿತು. 


COMMERCIAL BREAK
SCROLL TO CONTINUE READING

ಬಾಲಸೋರ್ ಜಿಲ್ಲೆಯ ಚಾಂದಿಪುರ ವ್ಯಾಪ್ತಿಯಿಂದ ಬೆಳಿಗ್ಗೆ 10.18ಕ್ಕೆ ಉಡಾವಣೆ ಮಾಡಲಾಯಿತು. ಈ ಕ್ಷಿಪಣಿಯು ಜೀವನ ವಿಸ್ತರಣಾ ಪರೀಕ್ಷೆಯ ಎಲ್ಲ ನಿಯತಾಂಕಗಳನ್ನು ಸಾಧಿಸಿದೆ. ಇದರೊಂದಿಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಧಿಕಾರಿ ತಿಳಿಸಿದ್ದಾರೆ.


ಬ್ರಹ್ಮೋಸ್ ಏರೋಸ್ಪೇಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO ) ಮತ್ತು ರಷ್ಯಾದ ಮ್ಯಾಶಿನೋಸ್ಟ್ರೊಯೆನಿಯಾದ ಫೆಡರಲ್ ಸ್ಟೇಟ್ ಯುನಿಟರಿ ಎಂಟರ್ಪ್ರೈಸ್(NPO) ನಡುವಿನ ಜಂಟಿ  ಯೋಜನೆಯಾಗಿದೆ.