ಮುಂಬಯಿ : ಇದೊಂದು ವಿಚಿತ್ರ ಮದುವೆ. ತಾನೊಬ್ಬ ಖಟ್ಟರ್ ಫೆಮಿನಿಸ್ಟ್ (Feminist) ಎಂದು ಹೇಳಿಕೊಳ್ಳುವ ವರ ಮಹಾಶಯ ಮದುವೆಯ ದಿನ ಪತ್ನಿಯಿಂದಲೇ ತಾಳಿ ಕಟ್ಟಿಸಿಕೊಂಡಿದ್ದಾನೆ. ಹುಡುಗನೇ ಹುಡುಗಿಗೆ ಯಾಕೆ ತಾಳಿಕಟ್ಟಬೇಕು..? ಹುಡುಗಿ ಯಾಕೆ ಹುಡುಗನಿಗೆ ತಾಳಿ ಕಟ್ಟಬಾರದು..? ಎಂಬ ಪ್ರಶ್ನೆಗೆ ಉತ್ತರವಾಗಿ ವರ ಮಹಾಶಯ  ತಾಳಿ ಕಟ್ಟಿಸಿಕೊಂಡಿದ್ದಾನೆ. 


COMMERCIAL BREAK
SCROLL TO CONTINUE READING

ಪರಸ್ಪರ ತಾಳಿ ಕಟ್ಟಿಸಿಕೊಂಡ ವಧು ಮತ್ತು ವರ:
ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಮದುವೆಯಾದ ಈ  ಜೋಡಿಯ ಹೆಸರು ಶಾರ್ದೂಲ ಕದಂ (Shardula Kadam) ಮತ್ತು ತನುಜಾ (Tanuja) . ಸ್ತ್ರೀ ಸಮಾನತೆಗೆ ಮಾದರಿಯಾಗುವ ನಿಟ್ಟಿನಲ್ಲಿ ಅವರು ಈ ರೀತಿ ಮಾಡಿದ್ದಾರೆ. ಹ್ಯೂಮನ್ ಆಫ್ ಬಾಂಬೆ (human of Bombay) ಎಂಬ ಫೊಟೋ ಬ್ಲಾಗ್‍ನಲ್ಲಿ ಶಾರ್ದೂಲ್ ತನ್ನ ಮದುವೆಯ ಕಥೆಯನ್ನು ಹಂಚಿಕೊಂಡಿದ್ದಾರೆ. ಮೊದಲು ಇದೊಂದು ಲವ್ ಕಂ ಅರೇಂಜ್ಡ್ ಮ್ಯಾರೇಜ್ (Marriage) .  ಇಬ್ಬರೂ ಫೆಮಿನಿಸಂ, ಸ್ತೀ ಸಮಾನತೆ ವಿಚಾರಗಳಲ್ಲಿ ಸಾಕಷ್ಟು ಆಕರ್ಷಣೆ ಹೊಂದಿದ್ದರು. ಈ ಯುವ ಜೋಡಿ ತಮ್ಮ ಮದುವೆಯ ದಿನ ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಕಲು ನಿರ್ಧರಿಸುತ್ತದೆ. 


ಇದನ್ನೂ ಓದಿ : ಅಪ್ಪಳಿಸಲಿದ್ದಾನೆ ಮೂರನೇ ರೂಪದ ಕರೋನಾ ರಕ್ಕಸ.! ನಮ್ಮ ಸಿದ್ಧತೆ ಹೇಗಿರಬೇಕು.?


ಮದುವೆಯ ದಿನ ನಾವಿಬ್ಬರೂ ಪರಸ್ಪರ ತಾಳಿಕಟ್ಟಿಸಿಕೊಳ್ಳಬೇಕು. ಅಂದರೆ ಶಾರ್ದೂಲಗೆ ತನುಜಾ ಮತ್ತು ತನುಜಾಗೆ ಶಾರ್ದೂಲ ತಾಳಿ ಕಟ್ಟಬೇಕು ಎಂದು ನಿರ್ಧರಿಸಿಕೊಳ್ಳುತ್ತಾರೆ. ಈ ನಿರ್ಧಾರದಿಂದ ಮನೆಯವರಿಗೆ ಅಚ್ಚರಿ, ಅಸಮಧಾನ ಉಂಟಾದರೂ, ಅವೆಲ್ಲವನ್ನೂ ಮರೆತು ಬಿಡುತ್ತಾರೆ. ಮದುವೆಯ ಖರ್ಚು ಸಮಾನವಾಗಿ ಹಂಚಿಕೊಳ್ಳುಲು ನಿರ್ಧರಿಸುತ್ತಾರೆ. ನಾನು ನಿನಗೆ ನಿಜವಾಗಿಯೂ ತಾಳಿ ಕಟ್ಟಬೇಕಾ ಎಂದು ಮದುವೆಯ ಹಿಂದಿನ ದಿನ ಶಾರ್ದೂಲನಿಗೆ ಕೇಳುತ್ತಾಳೆ ತನುಜಾ. ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಹೇಳುತ್ತಾನೆ ಶಾರ್ದೂಲ. ನಿರ್ಧರಿಸಿದಂತೆ ಮದುವೆಯ ದಿನ ಇಬ್ಬರೂ ಪರಸ್ಪರ ಮಂಗಲಸೂತ್ರ (Mangalasutra) ಕಟ್ಟಿಸಿಕೊಳ್ಳುತ್ತಾರೆ. 


ಮಂಗಲಸೂತ್ರ ಪ್ರಕರಣಕ್ಕೆ ನೆಟ್ಟಿಗರ ರಿಯಾಕ್ಷನ್ ಏನಿತ್ತು ಗೊತ್ತಾ..?
ಮದುವೆಯ ಮಾರನೇದಿನ ಬೆಳಗೆದ್ದು ಸೋಶಿಯಲ್ ಮೀಡಿಯಾ (Social media) ನೋಡಿದ ಜೋಡಿಗೆ ಶಾಕ್ ಆಗಿತ್ತು. ಸಂಪ್ರದಾಯ ಮುರಿದ ಶಾರ್ದೂಲ-ತನುಜಾ ಮದುವೆ ನೆಟ್ಟಿಗರ ಕೈಯಲ್ಲಿ ಟ್ರೋಲ್ (Troll) ಆಗಿದ್ದರು. ಮಂಗಳ ಸೂತ್ರ ಜೊತೆಗೆ ಸೀರೆ ಕೂಡಾ ಉಟ್ಟಿದ್ರೆ ಚೆನ್ನಾಗಿತ್ತು ಎಂದು ಯಾರೋ ಕಮೆಂಟ್ ಮಾಡಿದ್ದರು. ಉದಾರವಾದಿಗಳು ಅಂದು  ಕೊಂಡವರು ಕೂಡಾ ಟ್ರೋಲ್ ಮಾಡಿದ್ದರು. ಮೊದಲಿಗೆ ಆಘಾತವಾಯಿತಾದರೂ ಈಗ ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳುತ್ತಾರೆ ಶಾರ್ದೂಲ್. ಅಂದ ಹಾಗೆ ಶಾರ್ದೂಲ ಮತ್ತು ತನುಜ ಮದುವೆಯಾಗಿ ಇದೀಗ ನಾಲ್ಕು ತಿಂಗಳು ಕಳೆದಿದೆ.


ಇದನ್ನೂ ಓದಿ : Total Lockdown : ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಮೇ 16 ರವರೆಗೆ ಸಂಪೂರ್ಣ ಲಾಕ್‌ಡೌನ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.