ನವದೆಹಲಿ: ಈಗ ಸಾಮಾಜಿಕ ಮಾಧ್ಯಮದಲ್ಲಿ ಲಗ್ನ ಪತ್ರಿಕೆಯೊಂದು ವೈರಲ್ ಆಗಿ ಸಾಕಷ್ಟು ಹವಾ ಮಾಡುತ್ತಿದೆ.ಪಿ ಮಮತಾ ಬ್ಯಾನರ್ಜಿ ಮತ್ತು ಎಎಮ್ ಸೋಷಿಯಲಿಸಂ ಎಂಬ ವಧು-ವರರು ಜೂನ್ 13 ರಂದು ಮದುವೆಯಾಗುತ್ತಿರುವುದು ನೆಟಿಜನ್ ಗಳನ್ನೂ ಸಹಿತ ಗೊಂದಲಕ್ಕೀಡುಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...


ಈಗ ಫೋಟೋ ವೈರಲ್ ಆದ ನಂತರ ಲಗ್ನ ಪತ್ರಿಕೆ ನಿಜವೋ ಅಥವಾ ಫೋಟೋಶಾಪ್ ಆಗಿದೆಯೇ? ಎಂದು ಅನೇಕ ಜನರು ಆಶ್ಚರ್ಯ ಪಡುತ್ತಿದ್ದಾರೆ.ಆಮಂತ್ರಣವನ್ನು ಸೋಮವಾರ ಪ್ರಕಟಿಸಲಾಯಿತು ಮತ್ತು ಅಂದಿನಿಂದ ವರನ ತಂದೆ ಎ ಮೋಹನ್  ಈ ಕಾರ್ಡ್ ನಿಜವೆಂದು ಹೇಳಿದ್ದಾರೆ.ಅಷ್ಟೇ ಅಲ್ಲದೆ ತಮ್ಮ ಮಗನ ವಿವಾಹ ಇರುವುದು ನಿಜವೆಂದು ಅವರು ತಿಳಿಸಿದ್ದಾರೆ.ಅವರು ತಮಿಳುನಾಡಿನ ಸೇಲಂ ನಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ.


ಇದನ್ನೂ ಓದಿ: "ನಾನು ಭಾರತ ಕ್ರಿಕೆಟ್ ತಂಡದ ನಾಯಕನಾಗಬೇಕಾಗಿತ್ತು...ಆದರೆ..."


'ವಧು ಮತ್ತು ವರನ ಹೆಸರುಗಳ ಬಗ್ಗೆ ಪ್ರತಿಯೊಬ್ಬರೂ ತುಂಬಾ ಕುತೂಹಲ ಹೊಂದಿದ್ದಾರೆ. ಆಹ್ವಾನವು ನಿಜವೇ ಎಂದು ಪರಿಶೀಲಿಸಲು ಕಾರ್ಯಕರ್ತರು, ಸ್ನೇಹಿತರು ಮತ್ತು ಮಾಧ್ಯಮದ ಅನೇಕರು ನನ್ನನ್ನು ಕರೆದರು, ಅನೇಕ ಜನರು ಒಂದೇ ಪ್ರಶ್ನೆಯನ್ನು ಕೇಳಿದ್ದರಿಂದ ನನಗೆ ತುಂಬಾ ಕಿರಿಕಿರಿ ಉಂಟಾಯಿತು ಆ ಎಂದು ಮೋಹನ್ ಹೇಳಿದ್ದಾರೆ.


ಇದಲ್ಲದೆ, ಹೆಚ್ಚಿನ ಜನರು ಕಮ್ಯುನಿಸಮ್ ಅನ್ನು ಅನುಸರಿಸುವ ಕಟ್ಟೂರ್ ಗ್ರಾಮದಲ್ಲಿ ರಷ್ಯಾ, ಮಾಸ್ಕೋ, ಜೆಕೊಸ್ಲೊವಾಕಿಯಾ, ರೊಮೇನಿಯಾ, ವಿಯೆಟ್ನಾಂ, ವೆನ್ಮಣಿ, ಮುಂತಾದ ಹೆಸರುಗಳನ್ನು ಕಂಡುಹಿಡಿಯುವುದು ಹೆಚ್ಚು ಸಾಮಾನ್ಯವಲ್ಲ ಎಂದು ಮೋಹನ್ ವಿವರಿಸುತ್ತಾರೆ.


ಜೂನ್ 13 ರಂದು ಅಮನಿಕೊಂಡಲಂಪಟ್ಟಿ ಗ್ರಾಮದಲ್ಲಿರುವ ವಧುವಿನ ಮನೆಯಲ್ಲಿ ಈ ಮದುವೆ ನಡೆಯಲಿದೆ ಎಂದು ಕಾರ್ಡ್ ತಿಳಿಸಿದೆ.



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.