ದೆಹಲಿ ನಿವಾಸಿಗಳಿಗೆ ನಾಳೆಯಿಂದ ದೊರೆಯಲಿದೆ BS-VI ಪೆಟ್ರೋಲ್-ಡೀಸೆಲ್
ದೆಹಲಿಯ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಏಪ್ರಿಲ್ 1ರಿಂದ ದೆಹಲಿಯಲ್ಲಿ ಯುರೋ 6(ಬಿಎಸ್-6) ಸ್ಟ್ಯಾಂಡರ್ಡ್ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಏಪ್ರಿಲ್ 1ರಿಂದ ದೆಹಲಿಯಲ್ಲಿ ಯುರೋ 6(ಬಿಎಸ್-6) ಸ್ಟ್ಯಾಂಡರ್ಡ್ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಕಡಿಮೆ ಮಾಲಿನ್ಯದ ಇಂಧನವನ್ನು ಭಾನುವಾರ ಎಲ್ಲ ಮಳಿಗೆಗಳಿಗೆ(ಪೆಟ್ರೋಲ್ ಪಂಪ್) ಸರಬರಾಜು ಮಾಡಲಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (IOC) ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 1 ರಿಂದ ದೆಹಲಿಯಲ್ಲಿ ಪ್ರಾರಂಭವಾಗುವ ಯುರೋ 6 ಸ್ಟ್ಯಾಂಡರ್ಡ್ ಸ್ನೇಹಿ ಇಂಧನ ಸರಬರಾಜು 2020 ರ ಹೊತ್ತಿಗೆ ದೇಶಾದ್ಯಂತ ಪ್ರಾರಂಭವಾಗುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.
ಮಾಲಿನ್ಯ ಕಡಿಮೆ ಮಾಡಲು
ಈ ಹಿಂದೆ, ಸರ್ಕಾರ 2020ರ ಹೊತ್ತಿಗೆ BS -VI ಇಂಧನಗಳನ್ನು ಒದಗಿಸಲು ನಿರ್ಧರಿಸಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ಮತ್ತು ಹೊಗೆ ಸಮಸ್ಯೆಯನ್ನು ಗಮನಿಸಿದ ನಂತರ ತೈಲ ಸಚಿವಾಲಯ ಬಿಎಸ್ -VI ಇಂಧನವನ್ನು ದೆಹಲಿಯಲ್ಲಿ ಶೀಘ್ರದಲ್ಲೇ ಒದಗಿಸಲು ನಿರ್ಧರಿಸಿದೆ ಎಂದು ಅಧಿಕಾರಿ ಹೇಳಿದರು. ಪೆಟ್ರೋಲಿಯಂ ಸಚಿವಾಲಯದ ಈ ನಿರ್ಧಾರವು ಇಂಧನದ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ದೆಹಲಿಯಲ್ಲಿ ಉಂಟಾಗಿರುವ ವಾಯುಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
NCRಗೂ ಸಹ ಅನ್ವಯ
ಇದಲ್ಲದೆ, ಸಚಿವಾಲಯವು ಎನ್ಸಿಆರ್ ನ ಇತರ ನಗರಗಳಲ್ಲಿ ಏಪ್ರಿಲ್ 1, 2019 ರಿಂದ ಅದನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಇದರ ನಂತರ, ದೇಶದ ಇತರ ನಗರಗಳಲ್ಲಿ ಕೂಡಾ ಇದನ್ನು ಒದಗಿಸಲಾಗುತ್ತದೆ. ಏಪ್ರಿಲ್ 1, 2017 ರಿಂದ ಸುಪ್ರೀಂಕೋರ್ಟ್ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ವಾಹನ ತಯಾರಕರ ಬಿಎಸ್ -3 ವಾಹನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿತು.
ಸುಪ್ರೀಂಕೋರ್ಟಿನ ವಿಶೇಷ ಸಲಹೆ
ಇತ್ತೀಚೆಗೆ, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಡೀಸೆಲ್ ಬೆಲೆಯನ್ನು ಹೆಚ್ಚಿಸುವಂತೆ ಸರ್ಕಾರವು ಸುಪ್ರೀಂಕೋರ್ಟ್ಗೆ ಸೂಚಿಸಿದೆ. ದೆಹಲಿ- ಎನ್ಸಿಆರ್ ಹೊರತುಪಡಿಸಿ, ದೇಶದ ಅನೇಕ ನಗರಗಳಲ್ಲಿ ವಾಯುವಿನ ಮಟ್ಟವು ಇನ್ನೂ ಕೆಟ್ಟದಾಗಿದೆ. ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ. ಇದಲ್ಲದೆ, ಸುಪ್ರೀಂಕೋರ್ಟ್ ಏಪ್ರಿಲ್ 2019 ರವರೆಗೆ 13 ಮೆಟ್ರೋ ನಗರಗಳಿಗೆ ಬಿಎಸ್ -6 ಇಂಧನ ಒದಗಿಸುವಂತೆ ಸೂಚಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ತೈಲ ಮಾರಾಟ ಕಂಪನಿಗಳು ಇದನ್ನು ಚರ್ಚಿಸಬಹುದು ಎಂದು ನ್ಯಾಯಾಲಯ ಹೇಳಿದೆ.