ನವದೆಹಲಿ: ಸೇನಾ ದಿವಸ್(Army Day) ಸಂದರ್ಭದಲ್ಲಿ ದೇಶದ ಪ್ರತಿ ನಾಗರೀಕರು ಗಡಿಯಲ್ಲಿರುವ ಸೈನಿಕರಿಗೆ ಶುಭ ಹಾರೈಸಿದ್ದಾರೆ. ಯೋಧರ ಧೈರ್ಯ ಮತ್ತು ವಿವಿಧ ಸಾಹಸಗಳ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಸಂದೇಶಗಳ ಮೂಲಕ ಸೈನಿಕರು ಮತ್ತು ಅರೆಸೈನಿಕ ಪಡೆಗಳ ಸಿಬ್ಬಂದಿಗಳಿಂದ ಹಂಚಿಕೊಳ್ಳಲ್ಪಡುತ್ತವೆ. ಅಂತಹ ಒಂದು ವಿಡಿಯೋವನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಕ್ಯಾಂಟೀನ್ ನಿಂದ ಬಂದಿದೆ. ವಿಡಿಯೋದಲ್ಲಿರುವ ಬಿಎಸ್ಎಫ್ ಯೋಧನ ಧ್ವನಿಯು ಎಲ್ಲರನ್ನೂ ಭಾವುಕರನ್ನಾಗಿ ಮಾಡುವುದರ ಜೊತೆಗೆ ಈ ವೀಡಿಯೊವನ್ನು ಹಂಚಿಕೊಳ್ಳಲು ಒತ್ತಾಯಿಸುತ್ತದೆ.


COMMERCIAL BREAK
SCROLL TO CONTINUE READING

ಈ ಎರಡು ನಿಮಿಷದ 3-ಸೆಕೆಂಡ್ ವಿಡಿಯೋ ಹಾಡಿನ ಮಧ್ಯಂತರಗಳೊಂದಿಗೆ ಪ್ರಾರಂಭವಾಗುತ್ತದೆ, ವೀಡಿಯೊ ಸೈನ್ಯ ಮತ್ತು ಅರೆಸೈನಿಕ ಪಡೆಗಳಲ್ಲಿನ ಪ್ರತಿ ಯೋಧರ ಹೃದಯದ ನೋವನ್ನು ಪ್ರಸ್ತುತಪಡಿಸುತ್ತದೆ. ಹಾಡು ಪ್ರಾರಂಭವಾಗಿ... ಒಳ ನುಸುಳುತ್ತಿದ್ದಂತೆ ಅದನ್ನು ಕೇಳುಗರಿಗೆ ಅದನ್ನು ನಿಲ್ಲಿಸಲು ಮನಸ್ಸೇ ಆಗುವುದಿಲ್ಲ. ವಿಡಿಯೋದಲ್ಲಿ ಹಾಡು ಹೇಳುತ್ತಿರುವ ಜವಾನ್ ಜೊತೆ ನಿಂತಿರುವ ಜವಾನ್ ಗಳು ಕೂಡ ಧ್ವನಿ ಗೂದಿಸುತ್ತಾದೆ ಮತ್ತು ಶ್ಲಾಘನೆಯ ಮೂಲಕ ತಮ್ಮ ಮನೆಗೆ ಮರಳಲು ಭರವಸೆ ನೀಡಿದರು. ವೀಡಿಯೊವು ನಿಮ್ಮನ್ನು ಭಾವನಾತ್ಮಕವಾಗಿ ಮಾಡುತ್ತದೆ.


1997 ರಲ್ಲಿ ಮೂಡಿಬಂದ ಬಾರ್ಡರ್ ಚಿತ್ರವನ್ನು 1971 ರ ಇಂಡೋ-ಪಾಕ್ ಯುದ್ಧವನ್ನು ಆಧರಿಸಿ ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ  ಸನ್ನಿ ಡಿಯೋಲ್, ಜಾಕಿ ಶ್ರಾಫ್, ಅಕ್ಷಯ್ ಖನ್ನಾ ಮತ್ತು ಸುನಿಲ್ ಶೆಟ್ಟಿ ಅಭಿನಯಿಸಿದ್ದಾರೆ. ಬಾರ್ಡರ್ ಚಿತ್ರದ ಸಂದೇಸಿ ಆತೇ ಹೇ.. ಹಾಡನ್ನು ಸೋನು ನಿಗಮ್ ಹಾಡಿದ್ದರು.