Jioಗೆ ಸೆಡ್ಡು ಹೊಡೆದ BSNL, ಒಂದು ವರ್ಷದವರೆಗೂ ಪ್ರತಿದಿನ ಸಿಗಲಿದೆ 1 GB ಡಾಟಾ
ದೂರಸಂಪರ್ಕ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೊ ಆಗಮನದ ನಂತರ, ಟೆಲಿಕಾಂ ಕಂಪೆನಿಗಳ ನಡುವಿನ ಯುದ್ಧ ಹೆಚ್ಚಾಗಿದೆ. ಈಗ ಬಿಎಸ್ಎನ್ಎಲ್ ಸಹ ಜಿಯೋಗೆ ಸ್ಪರ್ಧಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ನವದೆಹಲಿ: ದೂರಸಂಪರ್ಕ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೊ ಆಗಮನದ ನಂತರ, ಟೆಲಿಕಾಂ ಕಂಪೆನಿಗಳ ನಡುವಿನ ಯುದ್ಧ ಹೆಚ್ಚಾಗಿದೆ. ಈಗ ಬಿಎಸ್ಎನ್ಎಲ್ ಸಹ ಜಿಯೋಗೆ ಸ್ಪರ್ಧಿಸಲು ಹೊಸ 'ಮ್ಯಾಕ್ಸಿಮ್' ಎಂಬ ಯೋಜನೆಯನ್ನು ಪ್ರಾರಂಭಿಸಿದೆ. BSNLನ ಈ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಕಂಪನಿ ಹೇಳಿದೆ. BSNL ಜಾರಿಗೊಳಿಸುರುವ ರೂ.999ರ ನೂತನ ಯೋಜನೆ ಪ್ರಿಪೇಯ್ಡ್ ಗ್ರಾಹಕರಿಗೆ 365 ದಿನಗಳು(ಒಂದು ವರ್ಷ) ಪ್ರತಿ ದಿನ 1 GB ಡಾಟಾ ನೀಡುವುದಲ್ಲದೆ, 181 ದಿನಗಳವರೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ಲಾಭವನ್ನೂ ಒದಗಿಸಲಿದೆ.
40 ಕೆಬಿಪಿಎಸ್ ವೇಗ
BSNLನ ಮ್ಯಾಕ್ಸಿಮ್ ಯೋಜನೆ ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ಎಲ್ಲಾ ವಲಯಗಳಿಗೆ ಅನ್ವಯಿಸುತ್ತದೆ. BSNLನ ಹೊಸ ಯೋಜನೆಯಲ್ಲಿ ಎಸ್ಎಂಎಸ್ (ಸಂದೇಶ)ಗಳನ್ನು ಅನಿಯಮಿತವಾಗಿ ಕಳುಹಿಸಬಹುದು. ಈ ಯೋಜನೆಯಲ್ಲಿ ಪ್ರತಿದಿನ 1 ಜಿಬಿ ಡಾಟಾ ಮಿತಿಯನ್ನು ತಲುಪಿದ ನಂತರ ಒಂದು ವರ್ಷದ ಮಾನ್ಯತೆಯು ವೇಗವನ್ನು ಕಡಿಮೆ ಮಾಡುತ್ತದೆ. ನೀವು ಒಂದು ದಿನದಲ್ಲಿ 1 ಜಿಬಿ ಡೇಟಾವನ್ನು ಬಳಸಿದರೆ, ನಂತರ ಇದರ ವೇಗ 40 ಕೆಬಿಪಿಎಸ್ ಆಗಿರುತ್ತದೆ.
181 ದಿನಗಳ ನಂತರ ಬದಲಾವಣೆ
BSNLನ ಈ ಯೋಜನೆಯಲ್ಲಿ 181 ದಿನಗಳು ಅನಿಯಮಿತ ಡೇಟಾ ಮತ್ತು ಸಂದೇಶ ಸೌಲಭ್ಯಗಳನ್ನು ಒದಗಿಸುತ್ತದೆ. 181 ದಿನಗಳ ನಂತರ ಇದರಲ್ಲಿ ಕೆಲವು ಬದಲಾವಣೆಗಳಿವೆ. ಇದರಲ್ಲಿ ನೀವು ಇಡೀ ವರ್ಷದ ಡೇಟಾದ ಪ್ರಯೋಜನಗಳನ್ನು ಪಡೆಯುತ್ತೀರಿ. ಮತ್ತೊಂದೆಡೆ, ಧ್ವನಿ ಕರೆ ಮಾಡುವಿಕೆಯ ಕುರಿತು ಮಾತನಾಡುವುದಾದರೆ, ಎಲ್ಲಾ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳ ಪ್ರಯೋಜನವನ್ನು (ದೆಹಲಿ ಮತ್ತು ಮುಂಬೈ ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ) ಲಭ್ಯವಿರುತ್ತದೆ. ದೆಹಲಿ ಮತ್ತು ಮುಂಬೈಗೆ ಮಾಡುವ ಧ್ವನಿ ಕರೆಗಳಿಗೆ ನಿಮಿಷಕ್ಕೆ 60 ಪೈಸೆ ಶುಲ್ಕ ವಿಧಿಸಲಾಗುತ್ತದೆ.