ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಅವರ ಸೋದರಳಿಯ ಆಕಾಶ್  ಬಿಎಸ್​ಪಿಯಲ್ಲಿ ಸಕ್ರಿಯರಾಗುವ ಬಗ್ಗೆ ಗುರುವಾರ ಘೋಷಿಸಿದರು. ಲಕ್ನೌದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈಗ ಆಕಾಶ್ ಬಿಎಸ್​ಪಿ ಚಳವಳಿಗೆ ಸಂಪರ್ಕಿಸುತ್ತೇವೆ. ಹೋರಾಟದ ಮನೋಭಾವ ಮತ್ತು ಕಷ್ಟಗಳನ್ನು ಎದುರಿಸುವುದನ್ನು ಕಲಿಯಲು ಅವಕಾಶವನ್ನು ನೀಡುತ್ತೇನೆ ಎಂದರು. ಮತ್ತೊಂದೆಡೆ, ಆಕಾಶ್ ಅವರ ದುಬಾರಿ ಶೂಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ವಿದೇಶದಲ್ಲಿ ಅಧ್ಯಯನ ಮುಗಿಸಿ ಹಿಂದಿರುಗಿರುವ ಆಕಾಶ್ ಆನಂದ್ ದುಬಾರಿ ಬ್ರಾಂಡ್ ಗಳಂತಹ ವಿಷಯಗಳನ್ನು ಇಷ್ಟಪಡುತ್ತಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಲಾಗಿದೆ. ಇತ್ತೀಚೆಗೆ ಆಕಾಶ್ ಆನಂದ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗಿದೆ. ಒಬ್ಬ ಬಳಕೆದಾರನು, "ಇವರ ಉಡುಗೆಯನ್ನು ನೋಡಿದರೆ ಅವರು ದುಬಾರಿ ವಿದೇಶಿ ಬ್ರಾಂಡ್ ಗಳನ್ನೂ ಇಷ್ಟಪಡುತ್ತಾರೆ ಎನಿಸುತ್ತದೆ. ಏಕೆಂದರೆ ಶೂ #Gucciಯಂತೆ ಕಾಣುತ್ತದೆ. ಅದರ ಬೆಲೆ ಲಕ್ಷಕ್ಕೆ ಸಮೀಪ ಇರಬಹುದು" ಎಂದು ಬರೆದಿದ್ದಾರೆ.


ಇದರ ಬೆನ್ನಲ್ಲೇ @ManavLive ಟ್ವಿಟ್ಟರ್ ಹ್ಯಾಂಡಲ್ ನಲ್ಲಿ GuCCI ಒಂದೇ ಬೆಲೆ $ 940 ಅಂದರೆ 66,824ರೂ. ಎಂದು ಬರೆಯಲಾಗಿದೆ. ನಮ್ಮ ತನಿಖೆಯ ಪ್ರಕಾರ, gucci.com ನಲ್ಲಿ (Children's Horsebit Gucci check slipper) ಈ ಶೂಗಳ ಬೆಲೆ  $ 290 (ಭಾರತೀಯ ಕರೆನ್ಸಿಯಲ್ಲಿ ರೂ 23,500). ವಿವಿಧ ದೇಶಗಳಲ್ಲಿ ವಿವಿಧ ಬೆಲೆಯಲ್ಲಿ ವಿದೇಶಿ ಉನ್ನತ ಬ್ರ್ಯಾಂಡ್ಗಳಲ್ಲಿ ಗುಸ್ಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.




ಟ್ವಿಟ್ಟರ್ ಬಳಕೆದಾರರ ಪ್ರತಿಕ್ರಿಯೆ:


@abhiyad02193054  ಟ್ವಿಟರ್ ಹ್ಯಾಂಡಲ್ ನಲ್ಲಿ "ಬಡ ದಲಿತ ನಾಯಕ" ಎಂದು ಬರೆಯಲಾಗಿದೆ.


@Brijend76417735 ಎಂಬುವವರು, "ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೊಂದು ಕುಟುಂಬದ ಉದಯ, ಮಾಯಾ ಪರಿವಾರ" ಎಂದು ಬರೆದಿದ್ದಾರೆ. 


@pkmdli ಟ್ವಿಟರ್ ಹ್ಯಾಂಡಲ್ ನಲ್ಲಿ "ಗಾಂಧಿ, ಲಾಲು, ಮುಲಾಯಂ, ಕರುಣಾನಿಧಿ ಮುಂತಾದವರಂತೆ ಇಲ್ಲಿ ಉತ್ತರಾಧಿಕಾರಿ ಕುಟುಂಬದಿಂದ ಬರುತ್ತಿದ್ದಾರೆ" ಎಂದಿದ್ದಾರೆ.