ನವದೆಹಲಿ: ಸಾಮಾನ್ಯ ವ್ಯಕ್ತಿಗೆ ಈ ಬಜೆಟ್ ಹೆಚ್ಚು ಅನುಕೂಲವೇನೂ ಆಗಿಲ್ಲ. ಒಂದೆಡೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಇನ್ನೊಂದೆಡೆ ಷೇರು ಮಾರುಕಟ್ಟೆಯ ಮೇಲೆ ತೆರಿಗೆ ವಿಧಿಸಲಾಗಿದೆ. ಆದರೆ, ಸಾರ್ವಜನಿಕರ ಆಸಕ್ತಿಯು ಇನ್ನೂ ಯಾವುದು ದುಬಾರಿ, ಯಾವುದು ಅಗ್ಗ ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಟಿವಿ, ಮೊಬೈಲ್, ಲ್ಯಾಪ್ ಟಾಪ್, ಕಾರ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದ್ದು ಇವು ದುಬಾರಿಯಾಗಲಿವೆ. ಪೆಟ್ರೋಲ್-ಡೀಸೆಲ್, ಆರೋಗ್ಯ ಸೇವೆ, ಲೆದರ್ ವಸ್ತುಗಳು ಸೇರಿದಂತೆ ಹಲವು ಅಗ್ಗವಾಗಲಿವೆ.


COMMERCIAL BREAK
SCROLL TO CONTINUE READING

ಇವು ದುಬಾರಿ


  • ಚಿನ್ನ-ಬೆಳ್ಳಿ 

  • ತರಕಾರಿ

  • ಟಿವಿ

  • ಕಂಪ್ಯೂಟರ್

  • ಮೊಬೈಲ್ ಫೋನ್

  • ತಂಬಾಕು ಉತ್ಪನ್ನಗಳು

  • ಶಾಂಪೂ, ಸೇವಿಂಗ್ ಸೆಟ್

  • ಸೌಂದರ್ಯ ವರ್ಧಕಗಳು

  • ಕಾರು

  • ಲ್ಯಾಪ್ ಟ್ಯಾಪ್ 

  • ಮನರಂಜನಾ ವೆಚ್ಚ

  • LED, LCD ಬಲ್ಬ್ 


ಇವು ಅಗ್ಗ


  • ಪೆಟ್ರೋಲ್-ಡಿಸೇಲ್

  • ಕೃಷಿ ಸಲಕರಣೆಗಳು

  • ಆರೋಗ್ಯ ಸೇವೆ

  • ಚರ್ಮದ ಉತ್ಪನ್ನಗಳು

  • ಗೋಡಂಬಿ