ನವದೆಹಲಿ: ಪ್ಯಾನ್ ಕಾರ್ಡ್ ಇಲ್ಲದವರು ಇದೀಗ ಆದಾಯ ತೆರಿಗೆ ಸಲ್ಲಿಸಲು ಚಿಂತಿಸಬೇಕಿಲ್ಲ. ಪ್ಯಾನ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್ ಸಹಾಯದಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ತೆರಿಗೆದಾರರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ದೇಶದಲ್ಲಿ 120 ಕೋಟಿ ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಈಗ ಪ್ಯಾನ್‌ನ ಅವಶ್ಯಕತೆ ಇರುವಲ್ಲೆಲ್ಲಾ ಆಧಾರ್ ಬಳಕೆ ಮೂಲಕ ನಿಮ್ಮ ನಿರ್ವಹಿಸಬಹುದು ಎಂದು ಅವರು ಹೇಳಿದರು.



ಇಲ್ಲಿಯವರೆಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಹೊಂದಿರುವುದು ಅವಶ್ಯಕವಾಗಿತ್ತು. ಆದಾಗ್ಯೂ, ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಸಹ ಅಗತ್ಯವಾಗಿದೆ. ಅದಕ್ಕಾಗಿ ಸೆಪ್ಟೆಂಬರ್ 30, 2019ರವೆರೆಗೆ ಅಂತಿಮ ಗಡುವು ನೀಡಲಾಗಿದೆ. ಈ ಮೊದಲು ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31, 2019 ಕೊನೆ ದಿನ ಎನ್ನಲಾಗಿತ್ತು, ಆದರೆ ಬಳಿಕ ದಿನಾಂಕವನ್ನು ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ.