ಅನಾರೋಗ್ಯದಿಂದ ಸುದೀರ್ಘ ಭಾಷಣವನ್ನು ಸಂಕ್ಷಿಪ್ತಗೊಳಿಸಿದ ನಿರ್ಮಲಾ ಸೀತಾರಾಮನ್...!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಅನಾರೋಗ್ಯದಿಂದಾಗಿ ಕೇಂದ್ರ ಬಜೆಟ್ 2020 ರ ಸುದೀರ್ಘ ಭಾಷಣವನ್ನು ಸಂಕ್ಷಿಪ್ತಗೊಳಿಸಿದರು.
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಅನಾರೋಗ್ಯದಿಂದಾಗಿ ಕೇಂದ್ರ ಬಜೆಟ್ 2020 ರ ಸುದೀರ್ಘ ಭಾಷಣವನ್ನು ಸಂಕ್ಷಿಪ್ತಗೊಳಿಸಿದರು.
ಸುಮಾರು ಎರಡೂವರೆ ಗಂಟೆಗಳ ಕಾಲದ ಬಜೆಟ್ ಭಾಷಣದಿಂದಾಗಿ ಬಳಲಿದಂತೆ ಕಂಡು ಬಂದ ಅವರು, ಇನ್ನೂ ಎರಡು ಪುಟಗಳು ಮಾತ್ರ ಇವೆ ಮತ್ತು ಬಜೆಟ್ ಅನ್ನು ಓದಲು ಪರಿಗಣಿಸಬೇಕು ಎಂದು ಅವರು ಲೋಕಸಭೆಗೆ ತಿಳಿಸಿದರು.
ಭಾಷಣದ ಮಧ್ಯ ಅವರ ರಕ್ತದೊತ್ತಡ ಕುಸಿದಿದ್ದರಿಂದಾಗಿ ಅವರಿಗೆ ಕುಳಿತುಕೊಳ್ಳಲು ಸೂಚಿಸಲಾಯಿತು.ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಅವರಿಗೆ ಒಂದು ಲೋಟ ನೀರು ನೀಡುತ್ತಿರುವುದು ಕಂಡುಬಂತು.ಮುಂದುವರಿಯಲು ಹಿಂಜರಿಯುತ್ತಿದ್ದಂತೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಧೈರ್ಯ ತುಂಬಿದರು. ನಂತರ, ಹಣಕಾಸು ಸಚಿವರು ಆರೋಗ್ಯವಾಗಿರುವುದಾಗಿ ಹೇಳಿ ರಾಜ್ಯಸಭೆಗೆ ತೆರಳಿದರು.
ನಿರ್ಮಲಾ ಸೀತಾರಾಮನ್ ಅವರು ಇದುವರೆಗಿನ ತಮ್ಮ ಅತಿ ದೀರ್ಘ ಬಜೆಟ್ ಭಾಷಣದ ದಾಖಲೆಯನ್ನು ಅಳಿಸಿದರು. ಕಳೆದ ವರ್ಷ, ಅವರ ಭಾಷಣವು ಎರಡು ಗಂಟೆಗಳ, 17 ನಿಮಿಷಗಳ ಕಾಲ ನಡೆಯಿತು. ಈ ವರ್ಷ ಅವರು ಎರಡು ಗಂಟೆ 41 ನಿಮಿಷಗಳನ್ನು ತೆಗೆದುಕೊಂಡರು. ಸುದೀರ್ಘ ಬಜೆಟ್ ಭಾಷಣದಲ್ಲಿ ಕಾಶ್ಮೀರಿ ಪದ್ಯ ಮತ್ತು ತಮಿಳು ಕಾವ್ಯದ ಉಲ್ಲೇಖವನ್ನು ಮಾಡಿದರು.