ಪ್ರಯಾಗರಾಜ್: ಕುಂಭ ಮೇಳದ ತಯಾರಿಯಲ್ಲಿರುವ ಹೆಲಿಪೋರ್ಟ್ ಕಟ್ಟಡ ಕುಸಿತ
ಪ್ರಯಾಗರಾಜ್ ನಲ್ಲಿ ಕುಂಭಮೇಳಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಹಲವು ರೀತಿಯ ಸೌಲಭ್ಯ ಕೈಗೊಳ್ಳಲಾಗಿದೆ.
ಪ್ರಯಾಗರಾಜ್: ಜನವರಿ 14 ರಿಂದ ಪ್ರಾರಂಭವಾಗಲಿರುವ ಕುಂಭ ಮೇಳದ ಸಿದ್ಧತೆ ಭರದಿಂದ ಸಾಗಿದೆ. ಏತನ್ಮಧ್ಯೆ, ಕುಂಭ ಮೇಳದ ತಯಾರಿಗಾಗಿ ನಿರ್ಮಿಸಲಾದ ಹೆಲಿಪೋರ್ಟ್ ಬಿಲ್ಡಿಂಗ್ನ ಒಂದು ಭಾಗವು ಬುಧವಾರ ರಾತ್ರಿ ಕುಸಿದಿದೆ. ತಡರಾತ್ರಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕೆಲಸ ಮುಂದುವರಿಯುತ್ತದೆ.
ಅಪಘಾತದ ಪೂರ್ಣ ವಿವರಗಳನ್ನು ನೀಡುತ್ತಾ, ಹೆಲಿಪೋರ್ಟ್ನ ಸುದ್ದಿ ಕುಸಿದ ತಕ್ಷಣವೇ ಸ್ಥಳಕ್ಕೆ ಬಂದ ಪಾರುಗಾಣಿಕಾ ತಂಡವು ಕಾರ್ಮಿಕರು ಇಬ್ಬರನ್ನು ಕರೆದೊಯ್ದಿದೆ ಎಂದು ತಿಳಿಸಿದ್ದಾರೆ. ಇಬ್ಬರೂ ಹತ್ತಿರದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಸ್ತವವಾಗಿ, ಕುಂಭ ಮೇಳದ ಸಮಯದಲ್ಲಿ ಬರುವ ಭಕ್ತರಿಗೆ ಹೆಲಿಕಾಪ್ಟರ್ ಸೌಲಭ್ಯವನ್ನು ಒದಗಿಸಲು ಹೆಲಿಪೋರ್ಟ್ ಅನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ, ಈ ಹೆಲಿಪೋರ್ಟ್ನಲ್ಲಿ ವಿವಿಐಪಿ ಅತಿಥಿಗಾಗಿ ಹೆಲಿಕಾಪ್ಟರ್ಗಳ ಪಾರ್ಕಿಂಗ್ ಕೂಡಾ ಸೌಲಭ್ಯ ಕಲ್ಪಸಲಾಗುತ್ತಿದೆ.
ಕುಂಭಮೇಳಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಹಲವು ರೀತಿಯ ಸೌಲಭ್ಯ ಕೈಗೊಳ್ಳಲಾಗಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕುಂಭ ಮೇಳಕ್ಕೆ ಕೈಗೊಂಡಿರುವ ಸಿದ್ಧತೆಗಳ ಬಗ್ಗ್ರ್ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಾರಿಯ ಕುಂಭಮೇಳದಲ್ಲಿ ಹಲವು ದೇಶಗಳ ಗಣ್ಯರು, ವಿವಿಧ ರಾಜ್ಯಗಳ ಪ್ರಸಿದ್ಧ ವ್ಯಕ್ತಿಗಳು ಹಾಜರಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.
ವಾರಣಾಸಿ-ಪ್ರಯಾಗರಾಜ್ ನಡುವೆ ಏರ್ಬೊಟ್ ಸೇವೆ:
ಕುಂಭಮೇಳಕ್ಕಾಗಿ ಜನವರಿ 26ರಿಂದ ವಾರಣಾಸಿ-ಪ್ರಯಾಗರಾಜ್ ನಡುವೆ ಏರ್ಬೊಟ್ ಸೇವೆಯನ್ನು ಸರ್ಕಾರ ಆರಂಭಿಸಲಿದೆ ಎಂದು ಯೂನಿಯನ್ ರೋಡ್ ಟ್ರಾನ್ಸ್ಪೋರ್ಟ್ ಮತ್ತು ಶಿಪ್ಪಿಂಗ್ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
ಗಂಗಾಗೆ ಸಂಬಂಧಿಸಿದ ನಗರಗಳಲ್ಲಿ ಘನತ್ಯಾಜ್ಯದ ಬಗ್ಗೆ ನಿಗಮದ ಕಮೀಷನರ್ಗಳ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, "ಇದು ರಶಿಯಾ ತಂತ್ರಜ್ಞಾನವಾಗಿದೆ, ಏರ್ಬೊಟ್ ವಾಹನ ಎಂಜಿನ್ ಅನ್ನು ಹೊಂದಿರುತ್ತದೆ, ಇದು ಒಂದು ಸಮಯದಲ್ಲಿ 16 ಜನರನ್ನು ಸಾಗಿಸಬಲ್ಲದು. ಈ ಏರ್ಬೊಟ್ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ" ಎಂದು ಮಾಹಿತಿ ನೀಡಿದರು.