ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪ್ರಾಣಿ-ಮನುಷ್ಯರ ನಡುವಿನ ಸಂಘರ್ಷ ಹೆಚ್ಚಾಗಿದೆ. ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿರುವುದು ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಇತ್ತೀಚೆಗಷ್ಟೇ ವಿಡಿಯೋ ಒಂದರಲ್ಲಿ ಎರಡು ಸಿಂಹಿಣಿಗಳನ್ನು ಗೂಳಿಯೊಂದು ಹಿಮ್ಮೆಟ್ಟಿಸಿದೆ.


COMMERCIAL BREAK
SCROLL TO CONTINUE READING

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ ಬೀದಿಗಳಲ್ಲಿ ಎರಡು ಸಿಂಹಿಣಿಗಳು ಅಲೆದಾಡುತ್ತಿರುವುದು ಕಂಡುಬಂದಿದ್ದು, ಸಿಂಹಿಣಿಯರು ಸಾಗುತ್ತಿದ್ದಂತೆಯೇ ಅಲ್ಲೊಂದು ಕಡೆ ಇವುಗಳಿಗೆ ಮನೆಯ ಆಚೆ ಕಟ್ಟಿ ಹಾಕಿರುವ ಗೂಳಿ ಕಾಣಿಸುತ್ತದೆ.  ಗೂಳಿ ಕಂಡ ತಕ್ಷಣ ಅದರ ಮೇಲೆ ದಾಳಿ ಮಾಡಲು ಸಿಂಹಿಣಿಗಳು ಪ್ಲ್ಯಾನ್ ಮಾಡಿದ್ದವು. 


 


 

 

 

 



 

 

 

 

 

 

 

 

 

 

 

A post shared by Meme wala (@memewalanews)


 


ಆದರೆ, ಸಿಂಹಿಣಿಯರನ್ನು ಕಂಡ ತಕ್ಷಣ ಹೆದರದೆ ಧೈರ್ಯ ಪ್ರದರ್ಶಿಸಿದ ಗೂಳಿ ಕೊಂಬಿನಿಂದ ತಿವಿಯುವುದಕ್ಕೆ ಪ್ರಯತ್ನಿಸಿದೆ.  ಸಿಂಹಿಣಿಗಳು ಅನೇಕ ಬಾರಿ ದಾಳಿ ಮಾಡಲು ಪ್ರಯತ್ನಿಸಿದರೂ,  ಗೂಳಿಯು ತನ್ನ ಜಾಣ್ಮೆ ಮತ್ತು ಧೈರ್ಯದಿಂದ ಸಿಂಹಿಣಿಗಳನ್ನೂ ಹಿಮ್ಮೆಟ್ಟಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ.


ಗುಜರಾತ್‌ನ ಜುನಾಗಡ್‌ನ ವಿಸ್ವದರ್ ತಾಲೂಕಿನ ಮೋಟಾ ಹದ್ಮತಿಯಾ ಗ್ರಾಮದಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.   


ಇದನ್ನೂ ಓದಿ: ಫ್ರಾನ್ಸ್, ಬ್ರಿಟನ್ ಹಿಂದಿಕ್ಕಿ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾನ ಪಡೆಯಲಿದೆ ಭಾರತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.