Bulli Bai App Case: ಬುಲ್ಲಿ ಬೈ ಆಪ್ (Bulli Bai App) ಪ್ರಕರಣದಲ್ಲಿ ಓರ್ವ ಅನುಮಾನಾಸ್ಪದ ಮಹಿಳೆಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಇಡೀ ಪ್ರಕರಣದಲ್ಲಿ ಮಹಿಳೆಯನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದೆ. ಈ ವಿಷಯ ಸೂಕ್ಷ್ಮವಾಗಿರುವುದರಿಂದ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಇದಕ್ಕೂ ಮುನ್ನ ಮುಂಬೈ ಪೊಲೀಸರ ಸೈಬರ್ ಸೆಲ್ ವಿಶಾಲ್ ಕುಮಾರ್ ಝಾ ಎಂಬ 21 ವರ್ಷದ ಯುವಕನನ್ನು ಬಂಧಿಸಿತ್ತು. ಸಿವಿಲ್ ಇಂಜಿನಿಯರಿಂಗ್ ಓದುತ್ತಿರುವ ವಿಶಾಲ್ ನನ್ನು ಬುಲ್ಲಿ ಬೈ ಆಪ್ ಪ್ರಕರಣದಲ್ಲಿ ಬೆಂಗಳೂರಿನಿಂದ ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ವಿಶಾಲ್ ಝಾ ಹೊರತುಪಡಿಸಿ, ಈ ಅಪ್ಲಿಕೇಶನ್ ಮಾಡುವಲ್ಲಿ ಪಾತ್ರ ವಹಿಸಿದವರು ಹಲವರು ಇದ್ದಾರೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಇದಲ್ಲದೆ, ಡಿಸೆಂಬರ್ 31 ರಂದು, ಬಂಧಿತ ಆರೋಪಿ ಈ ಆಪ್ ಹೆಸರನ್ನು ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಹೆಸರಿಗೆ ಬದಲಾಯಿಸಿದ್ದಾರೆ ಹಾಗೂ ಅದನ್ನುಸಿಖ್ ಫಾರ್ ಜಸ್ಟೀಸ್ (SFJ) ಸಿದ್ಧಪಡಿಸಿದೆ ಎಂಬಂತೆ ತೋರಿಸಲು ಯತ್ನಿಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.


ವಿಶಾಲ್ (Vishal Kumar Jha) ಮತ್ತು ಉತ್ತರಾಖಂಡದ ಮಹಿಳೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಹೊಂದಿದ್ದರು, ನಂತರ ಈ ಮಹಿಳೆ ಅವನನ್ನು "ಬುಲ್ಲಿ ಅಪ್ಲಿಕೇಶನ್" ಗೆ ಲಿಂಕ್ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ, ಆ ಮಹಿಳೆಯ ಇನ್ನೊಬ್ಬ ಸ್ನೇಹಿತ ಅಪರಾಧ ವಿಭಾಗದ ರೇಡಾರ್ ನಲ್ಲಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. 


ಇದನ್ನೂ ಓದಿ-ಕರುನಾಡಲ್ಲಿ ‘ಕೊರೊನಾ’ ಸ್ಫೋಟ: ಒಂದೇ ದಿನ 2,479 ಕೇಸ್ ಕನ್ಫರ್ಮ್..!


ತಲೆಮರೆಸಿಕೊಂಡಿರುವ ಆರೋಪಿಗಳ ಜತೆ ಉತ್ತರಾಖಂಡದ ಯುವತಿಯು ಕಾಲ್ಪನಿಕತೆಗಾಗಿ ಬುಲ್ಲಿ ಬೈ ಎಂಬ ಹೆಸರಿನ ಅಪ್ಲಿಕೇಷನ್ ಸೃಷ್ಟಿಸಿ ಮುಸ್ಲಿಂ ಸಮಾಜದ ಪ್ರತಿಷ್ಠಿತ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಚಿತ್ರಗಳನ್ನು (Profile Pictures) ಸಾಮಾಜಿಕ (Social Media Platforms) ಜಾಲತಾಣಗಳಾದ Instagram, Twitter, Facebook ನಿಂದ ಡೌನ್ಲೋಡ್ ಮಾಡಿಕೊಂಡು, ಅವುಗಳನ್ನು ಬುಲ್ಲಿ ಬೈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿ, ಅಲ್ಲಿ ಅವರ ಬಿಡ್ಡಿಂಗ್ ನಡೆಸಲಾಗುತ್ತಿತ್ತು. 


ಇದನ್ನೂ ಓದಿ-Lockdown ಅವಧಿಯಲ್ಲಿ 145 ಡಿಗ್ರಿಗಳನ್ನು ಪೂರೈಸಿದ ವ್ಯಕ್ತಿಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ


ಈ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಪ್ರಶ್ನೆ ಎತ್ತಿದಾಗ ಮತ್ತು ದೂರು ಸಲ್ಲಿಸಿದಾಗ ಮುಂಬೈ ಪೊಲೀಸರ ಸೈಬರ್ ಸೆಲ್ ತಂಡ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ಸೆಕ್ಷನ್ 354 ಡಿ, 509, 500, 153 ಎ, 295 ಎ, 153 ಬಿ, IT ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಆರಂಭಿಸಿದೆ.


ಇದನ್ನೂ ಓದಿ-Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.