ಹಬ್ಬದ ಋತುವಿನಲ್ಲಿ ಕಾರು ಕಂಪನಿಗಳು ಆಕರ್ಷಕ ರಿಯಾಯಿತಿ ನೀಡುತ್ತಿವೆ. ಮಾರುತಿ, ಹ್ಯುಂಡೈ, ಟಾಟಾ ಕಂಪನಿಗಳು ಕೂಡಾ ತನ್ನ ಕಾರುಗಳ ಮೇಲೆ ಬಂಪರ್ ರಿಯಾಯಿತಿ ನೀಡುತ್ತಿವೆ. ಆದರೆ, ಟಾಟಾ ಮೋಟಾರ್ಸ್ "ಉಡುಗೊರೆಗಳ ಉತ್ಸವ"ದಲ್ಲಿ ಗ್ರಾಹಕರನ್ನು ಆಕರ್ಷಿಸಲು ವಿಶೇಷ ಕೊದುಗೆಗಳನ್ನೂ ನೀಡುತ್ತಿದೆ. ಇದರಲ್ಲಿ, ಪ್ರತಿ ಕಾರಿನ ಖರೀದಿಗೆ ಗ್ರಾಹಕರಿಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಉಚಿತವಾಗಿ ಸಿಗಲಿದೆ iPhone X
ಟಾಟಾ ತನ್ನ ಕಾರುಗಳಾದ ಹೆಕ್ಸಾ, ನೆಕ್ಸನ್, ಟೈಗರ್, ಟೈಗೊ ಮತ್ತು ಝೆಸ್ಟ್ನಲ್ಲಿ ಬಂಪರ್ ರಿಯಾಯಿತಿಗಳನ್ನು ತಂದಿದೆ. ಪ್ರಸ್ತಾಪದಲ್ಲಿ ರೂ. 98,000 ರೂ.ಗಳ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ. ಇಷ್ಟೇ ಅಲ್ಲ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು iPhone X ಅನ್ನು ಉಡುಗೊರೆಯಾಗಿ ನೀಡುತ್ತಿದೆ. ಆದರೆ, ಈ ಉಡುಗೊರೆ ಟಾಟಾ ಹೆಕ್ಸಾವನ್ನು ಬುಕ್ ಮಾಡುತ್ತಿರುವ ಗ್ರಾಹಕರಿಗೆ ಲಭ್ಯವಿರುತ್ತದೆ. ಟಾಟಾ ಹೆಕ್ಸಾವನ್ನು ಖರೀದಿಸುವ ಗ್ರಾಹಕರು iPhone Xನ್ನು ಉಚಿತ ಕೊಡುಗೆಗಾಗಿ ಆಯ್ಕೆ ಮಾಡಬಹುದು.


ಏನೆಲ್ಲಾ ಆಫರ್ ಇದೇ?
ಟಾಟಾದ ಕಾರುಗಳಲ್ಲಿ ನಗದು ರಿಯಾಯಿತಿಯ ಹೊರತಾಗಿ, ಆಭರಣಗಳನ್ನು ಖರೀದಿಸಲು ತನಿಷ್ಕ್ ವೋಚರ್, ಟ್ಯಾಬ್ ಗಳು ಮತ್ತು 32 ಇಂಚಿನ ಎಲ್ಇಡಿ ಟಿವಿಗಳನ್ನು ಕೂಡಾ ಕೊಡುಗೆಯಾಗಿ ಪಡೆಯಬಹುದು. ಈ ಪ್ರಸ್ತಾಪವು Tigor, Tiago, Zest ಮತ್ತು Safari with Storm ಗಳೊಂದಿಗೆ ಲಭ್ಯವಿದೆ. ವಿಶೇಷ ವಿಷಯವೆಂದರೆ, ಗ್ರಾಹಕನಿಗೆ ಬೇಕಾದ ಉಡುಗೊರೆಯನ್ನು ಗ್ರಾಹಕರು ಕಂಪನಿಗೆ ತಿಳಿಸಬಹುದು.


ಯಾವ ಕಾರಿನಲ್ಲಿ ರಿಯಾಯಿತಿ?


ಕಾರುಗಳು       ಅದರ ಮೇಲಿನ ರಿಯಾಯಿತಿ
Tata Tiger       Rs 73,000 
Tata Nexus     Rs 57,000
Tata Tiago      Rs 40,000
Tata Hexa       Rs 98,000
Tata Storm      Rs 87,000
Tata Zest         Rs 83,000


ಟಾಟಾ ಹೆಕ್ಸಾದ ಬೆಲೆ ಎಷ್ಟು?
ಟಾಟಾದ ಹೆಕ್ಸಾವನ್ನು ಖರೀದಿಸುವುದರೊಂದಿಗೆ iPhone X ವನ್ನು ಉಚಿತವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ವಾಸ್ತವವಾಗಿ, ಟಾಟಾ ಈ ಕಾರನ್ನು ಖರೀದಿಸಲು 12 ಲಕ್ಷ 57 ಸಾವಿರ ಖರ್ಚಾಗುತ್ತದೆ. ಹಬ್ಬದ ಋತುವಿನಲ್ಲಿ, ಟಾಟಾ ಮೋಟರ್ಸ್ ಈ ಕಾರಿನಲ್ಲಿ ರೂ. 98,000 ವರೆಗೆ ನಗದು ರಿಯಾಯಿತಿ ನೀಡಿದೆ. ಅದೇ ಸಮಯದಲ್ಲಿ,  iPhone X ಬೆಲೆ ಬಹುತೇಕ ಒಂದೇ ಆಗಿದೆ. ಈ ಸಂದರ್ಭದಲ್ಲಿ, ಗ್ರಾಹಕರಿಗೆ ಸ್ವಇಚ್ಛೆಯಿಂದ ಅದನ್ನು ಆಯ್ಕೆ ಮಾಡುವ ಆಯ್ಕೆಯೂ ಇದೆ. ಅವರು ಬಯಸಿದರೆ, ಅವರು ಐಫೋನ್ ಹೊರತುಪಡಿಸಿ ನಗದು ರಿಯಾಯಿತಿಯ ಲಾಭ ಪಡೆಯಬಹುದು.


SUV ಸೆಗ್ಮೆಂಟ್ ಕೈಗೆಟುಕುವ ಕಾರು:
ಟಾಟಾ ಹೆಕ್ಸಾ 7-ಆಸನಗಳ ಎಸ್ಯುವಿ. ಎಸ್ಯುವಿ ವಿಭಾಗದಲ್ಲಿ ಇತರ ಕಾರುಗಳಿಗಿಂತ ಅಗ್ಗವಾಗಿದೆ. ಇದು ಶಕ್ತಿಯುತವಾಗಿರುವ ಜೊತೆಗೆ, ಈ ಕಾರಿನ ನೋಟವನ್ನು ಸಹ ಇತರ ಕಾರುಗಳೊಂದಿಗೆ ಪೈಪೋಟಿ ತೋರುತ್ತದೆ. ಮಾರುಕಟ್ಟೆಯಲ್ಲಿ ಇದು ಮಹೀಂದ್ರಾ XUV 500 ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾದೊಂದಿಗೆ ಸ್ಪರ್ಧಿಸುತ್ತಿದೆ.