ಬಂಪರ್ ಕೊಡುಗೆ! ಈ ರೀತಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿ ಗೆಲ್ಲಿರಿ ಸ್ಮಾರ್ಟ್‌ಫೋನ್
ಜನರು ಡಿಜಿಟಲ್ ಸೇವೆಯನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಮಾಡುವ ಸಲುವಾಗಿ ಅನೇಕ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ.
ನವದೆಹಲಿ: ಡಿಜಿಟಲ್ ಇಂಡಿಯಾ ಮತ್ತು ಹಳ್ಳಿಗಳಲ್ಲಿ ಉದ್ಯೋಗ ಹೆಚ್ಚಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಜನರು ಡಿಜಿಟಲ್ ಸೇವೆಯನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಮಾಡುವ ಸಲುವಾಗಿ ಅನೇಕ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿರುವವರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಅಲ್ಲದೆ ಡಿಜಿಟಲ್ ಸೇವಾ ಪೋರ್ಟಲ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಗೆಲ್ಲುವ ಅವಕಾಶವನ್ನೂ ನೀಡಿದೆ.
ಏಪ್ರಿಲ್ 22ರಂದು ಪ್ರಾರಂಭವಾಗಿರುವ ಈ ಯೋಜನೆಯ ಲಾಭವನ್ನು ಮೇ 21ರವರೆಗೆ ಪಡೆಯಬಹುದಾಗಿದೆ. ಈ ಯೋಜನೆಯಡಿ 100 ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸುವ 5 ಉನ್ನತ ವಿಎಲ್‌ಇಗಳನ್ನು ಆಯ್ಕೆ ಮಾಡಲಾಗುವುದು ಮತ್ತು ಈ ವಿಎಲ್‌ಇ ಸ್ಮಾರ್ಟ್‌ಫೋನ್ ಗೆಲ್ಲಬಹುದು.
ಗ್ರಾಮದ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ಮತ್ತು ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಸಾಮಾನ್ಯ ಸೇವಾ ಕೇಂದ್ರ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದೆ. ಸೇವಾ ಕೇಂದ್ರದ ಸಹಾಯದಿಂದ ಸರ್ಕಾರವು ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಹೊಂದಿರದ ದೇಶದ ಆ ಪ್ರದೇಶಗಳಿಗೆ ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಇ-ಸೇವೆಗಳನ್ನು ತಲುಪಿಸುತ್ತಿದೆ.
ಸಿಎಸ್‌ಸಿಯ ಇ-ಗೋವ್ (CSCeGov) ಪೋರ್ಟಲ್ ಪ್ರಕಾರ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿರುವ ಗ್ರಾಮ ಮಟ್ಟದ ಉದ್ಯಮಿ ಕನಿಷ್ಠ 100 ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸಬೇಕಾಗುತ್ತದೆ.