ಮುಂಬರುವ ಕೆಲವು ತಿಂಗಳುಗಳಲ್ಲಿ ನೀವು ವಿಮಾನದಲ್ಲಿ ಎಲ್ಲಿಗಾದರೂ ಪ್ರಯಾಣ ಬೆಳಸುವ ಯೋಜನೆಯನ್ನು ಹೊಂದಿದ್ದರೆ, ಈಗಲೇ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿ. ಆದರೆ ಅದಕ್ಕೂ ಮುನ್ನ ಈ ಸುದ್ದಿ ಓದಿ. ಏಕೆಂದರೆ ನಿಮಗೆ ಒಂದೊಳ್ಳೆ ಆಫರ್‌ ಬಗ್ಗೆ ಮಾಹಿತಿಯನ್ನು ನೀಡಿಲಿದ್ದೇವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Arecanut Price: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೀಗಿದೆ ನೋಡಿ


ಏರ್ ಏಷ್ಯಾ ಇಂಡಿಯಾ ಅಗ್ಗದ ವಿಮಾನ ಪ್ರಯಾಣದ ಆಫರ್ ನೀಡಿದೆ. ಕೈಗೆಟಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಏರ್‌ಏಷ್ಯಾ ಇಂಡಿಯಾ ಮುಂದಾಗಿದೆ. ನೀವು ಏರ್‌ ಏಷ್ಯಾ ಇಂಡಿಯಾದ #PayDaySale ಅಡಿಯಲ್ಲಿ ಏರ್ ಟಿಕೆಟ್‌ಗಳನ್ನು 1,499 ರೂ.ಗಳಿಂದ ಬುಕ್ ಮಾಡಬಹುದು. ಏರ್ ಏಷ್ಯಾ ಇಂಡಿಯಾ ತನ್ನ ಪೇ ಡೇ ಸೇಲ್ ಆರಂಭಿಸುವುದಾಗಿ ಘೋಷಿಸಿದೆ.


ಜುಲೈ 31ರವರೆಗೆ ಟಿಕೆಟ್ ಬುಕ್ ಮಾಡಬಹುದು: 
ಏರ್ ಏಷ್ಯಾ ಇಂಡಿಯಾದ ಈ ಮಾರಾಟವು ಜುಲೈ 28 ರಿಂದ 31 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮಾಡಿದ ಬುಕಿಂಗ್‌ಗಳಿಗೆ ಈ ಕೊಡುಗೆ ಅನ್ವಯಿಸುತ್ತದೆ. ಅಂದರೆ, ನೀವು ಈಗ ಎರಡು ದಿನಗಳಲ್ಲಿ ಟಿಕೆಟ್‌ ಬುಕ್‌ ಮಾಡಬೇಕು. ಈ ಯೋಜನೆಯಡಿಯಲ್ಲಿ ಟಿಕೆಟ್ ಕಾಯ್ದಿರಿಸಿ, ಆಗಸ್ಟ್ 15 ಮತ್ತು ಡಿಸೆಂಬರ್ 31 ರ ನಡುವೆ ಪ್ರಯಾಣಿಸಬಹುದು. ಸೀಮಿತ ದಾಸ್ತಾನುಗಳಿಗಾಗಿ ಏರ್‌ಲೈನ್‌ನಿಂದ ಈ ಕೊಡುಗೆಯನ್ನು ನೀಡಲಾಗಿದೆ. ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಅನ್ವಯವಾಗುವ ಈ ಆಫರ್‌ಗೆ ಸಂಬಂಧಿಸಿದಂತೆ, ನಿರ್ದಿಷ್ಟ ಮಾರ್ಗದಲ್ಲಿ ಈ ಯೋಜನೆಯಡಿ ನಿಗದಿಪಡಿಸಿದ ಸೀಟುಗಳನ್ನು ಮಾರಾಟ ಮಾಡಿದ ನಂತರ ನಿಯಮಿತ ಬೆಲೆಗಳು ಅನ್ವಯವಾಗುತ್ತವೆ ಎಂದು ಏರ್‌ಲೈನ್ ಹೇಳಿದೆ.


ಇದನ್ನೂ ಓದಿ: ಯುನಿಕಾರ್ನ್ ಕಂಪನಿಗಳಲ್ಲಿ ಭಾರತೀಯರೇ ಮೇಲುಗೈ: ಯುಎಸ್‌ ಸಮೀಕ್ಷೆಯಿಂದ ಬಯಲು


ಟಿಕೆಟ್ ಬುಕ್ ಮಾಡುವುದು ಹೇಗೆ?
#PayDaySale ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು, ನೀವು ಮೊದಲು ಏರ್ ಏಷ್ಯಾ ವೆಬ್‌ಸೈಟ್ http://airasia.co.in ಗೆ ಭೇಟಿ ನೀಡಬೇಕು. ಆಫರ್‌ನ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಲ್ಲಿ ನೀವು 15 ಆಗಸ್ಟ್‌ನಿಂದ 31 ಡಿಸೆಂಬರ್ 2022 ರವರೆಗೆ ಪ್ರಯಾಣಿಸಬಹುದು. ಈ ಹಿಂದೆ ವಿಮಾನಯಾನ ಸಂಸ್ಥೆಯು ಜುಲೈ 7-10 ರ ನಡುವೆ ಬುಕ್ ಮಾಡಿದ ಟಿಕೆಟ್‌ಗಳಿಗಾಗಿ ಆಯ್ದ ದೇಶೀಯ ಮಾರ್ಗಗಳಲ್ಲಿ 1,497 ರೂಪಾಯಿಗಳಿಂದ ಪ್ರಾರಂಭವಾಗುವ ದರಗಳೊಂದಿಗೆ 'ಸ್ಪ್ಲಾಶ್ ಸೇಲ್' ಅನ್ನು ಘೋಷಿಸಿತ್ತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.