ಹಿಮಾಚಲ ಪ್ರದೇಶದಲ್ಲಿ ಬಸ್ ಕೊಳಕ್ಕೆ ಬಿದ್ದು 15 ಸಾವು, 25 ಜನರಿಗೆ ಗಾಯ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 50 ಜನರನ್ನು ಹೊತ್ತ ಖಾಸಗಿ ಬಸ್ ಕೊಳಕ್ಕೆ ಬಿದ್ದ ಪರಿಣಾಮವಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕರು ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ನವದೆಹಲಿ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 50 ಜನರನ್ನು ಹೊತ್ತ ಖಾಸಗಿ ಬಸ್ ಕೊಳಕ್ಕೆ ಬಿದ್ದ ಪರಿಣಾಮವಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕರು ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಬಸ್ ಬಂಜಾರ್ ನಿಂದ ಬಂಜಾರ್‌ನಿಂದ ಗಡಗುಶಾನಿ ಪ್ರದೇಶಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.ಈಗ ಈ ಘಟನೆ ಕುಲ್ಲುದ ಬಂಜಾರ್ ಪ್ರದೇಶದ ಬಳಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಬಸ್ ಪ್ರಯಾಣದ ವೇಳೆ ಹಲವು ಪ್ರಯಾಣಿಕರು ಬಸ್ಸಿನ ಮೇಲೆ ಕುಳಿತಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ತಿಳಿಸಿವೆ. ದುರಂತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಕುಲ್ಲುದ ಪೋಲಿಸ್ ವರಿಷ್ಠಾಧಿಕಾರಿ ಶಾಲಿನಿ ಹೇಳುವಂತೆ " ಬಸ್ ಸುಮಾರು 50 ಜನರನ್ನು ಹೊತ್ತು ಸಾಗುತ್ತಿತ್ತು ಕುಲ್ಲು ಪ್ರದೇಶದ ಹತ್ತಿರ ವಿರುವ ಬಂಜಾರ್ ಕೊಳದಲ್ಲಿ ಈ ಘಟನೆ ಸಂಭವಿಸಿದೆ, ಇದುವರೆಗೆ ಸುಮಾರು 15 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 25 ಜನರು ಗಾಯಗೊಂಡಿದ್ದಾರೆ ರಕ್ಷಣಾ ಕಾರ್ಯ ಮುಂದುವರೆದಿವೆ " ಎಂದು ಪ್ರತಿಕ್ರಿಯಿಸಿದ್ದಾರೆ. ಟಿವಿಯಲ್ಲಿ ಬಿತ್ತರಿಸಿರುವ ಫೋಟೋಗಳು ಸುಮಾರು 500 ಎತ್ತರದಿಂದ ಬಿದ್ದಿರುವ ಬಸ್ ನ್ನು ತೋರಿಸಿವೆ.