Road Accident: ಉತ್ತರಾಖಂಡದ ಅಲ್ಮೊರಾ ಮತ್ತು ಸಾಲ್ಟ್ ಪ್ರದೇಶದ ಮರ್ಕುಲಾ ಬಳಿಯ ಕುಪಿಯಲ್ಲಿ ಪ್ರಯಾಣಿಕರ ತುಂಬಿದ್ದ ಬಸ್ ಕಂದಕಕ್ಕೆ ಬಿದ್ದು ಭಾರೀ ಅಪಘಾತ ಸಂಭವಿಸಿದೆ. ಈ ಅಪಘಾತ ಸಂಭವಿಸಿದ 15 ಮೃತದೇಹಗಳು ಪತ್ತೆಯಾಗಿವೆ. ಅಪಘಾತ ಘಟಿಸಿದ ಬಸ್ ನಲ್ಲಿ 46 ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಮುಂದುವರೆದ ಪರಿಹಾರ ಕಾರ್ಯ: 
ಸದ್ಯದ ಮಾಹಿತಿಗಳ ಪ್ರಕಾರ ಅಪಘಾತಕ್ಕೆ ತುತ್ತಾದ ಬಸ್ ಪೌರಿ ಜಿಲ್ಲೆಯಿಂದ 46 ಜನರನ್ನು ತುಂಬಿಕೊಂಡು ರಾಮನಗರ ಕಡೆಗೆ ಪ್ರಯಾಣಿಸುತ್ತಿತ್ತು. ಇದೇ ವೇಳೆ ಕುಪಿ ಬಳಿ ಆಳವಾದ ಕಂದಕಕ್ಕೆ ಬಿದ್ದಿದೆ. 


ದೀಪಾವಳಿ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ: ಈ ಉದ್ಯೋಗದಲ್ಲಿ ದುಡಿದು ನಿವೃತ್ತಿ ಪಡೆದವರ ಮಕ್ಕಳ ಖಾತೆಗೆ ಬೀಳಲಿದೆ 50 ಸಾವಿರ ರೂ


ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಸದ್ಯ ಮೃತದೇಹಗಳನ್ನು ಹೊರತೆಗೆಯುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸಗಳು ನಡೆಯುತ್ತಿವೆ. ನೈನಿತಾಲ್ ಜಿಲ್ಲೆಯ ಪೊಲೀಸರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ-  ಉಲ್ಟಾ ಪಲ್ಟಾ ಬರೆದರೂ ಈ ಊರಿನ ಹೆಸರು ಮಾತ್ರ ಬದಲಾಗಲ್ಲ..! ಗದಗ ಅಲ್ಲ.. ಬೇರೆ ಜಿಲ್ಲೆ.. 


15 ಮೃತದೇಹಗಳು ಪತ್ತೆ 
ಅಪಘಾತ ಸಂಭವಿಸಿರುವ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಮತ್ತು SDRF ತಂಡಗಳು 15 ಮೃತದೇಹಗಳನ್ನು ಹೊರತೆಗೆದಿದ್ದು ಅಲ್ಲಿನ ಚಿತ್ರಣ ಹೃದಯ ವಿದ್ರಾವಕವಾಗಿದೆ. ಕಂದಕಕ್ಕೆ ಉರುಳಿರುವ ಬಸ್ ಗರ್ವಾಲ್ ಮೋಟಾರ್ ಬಳಕೆದಾರರಿಗೆ ಸೇರಿದ್ದು ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.