ನವದೆಹಲಿ: ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಜನವರಿ 29 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.


COMMERCIAL BREAK
SCROLL TO CONTINUE READING

ರಾಜಸ್ತಾನದಲ್ಲಿ ಎರಡು (ಅಲ್ವಾರ್ ಮತ್ತು ಅಜ್ಮೀರ್) ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದು (ಉಲುಬೆರಿಯಾ) ಒಟ್ಟು ಮೂರು ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದೆ ಸಂದರ್ಭದಲ್ಲಿ ರಾಜಸ್ಥಾನದ ಮಂಡ್ಹಾಲ್ಗಢ ಮತ್ತು ಪಶ್ಚಿಮ ಬಂಗಾಳದ ನೋಪರಾ ಕ್ಷೇತ್ರಗಳ ವಿಧಾನಸಭಾ   ಸ್ಥಾನಗಳನ್ನು ತುಂಬಲು ಮತದಾನ ನಡೆಯಲಿದೆ.


ಜನವರಿ 3 ರಂದು ಉಪಚುನಾವಣೆಗೆ ಗೆಜೆಟ್ ಅಧಿಸೂಚನೆಯನ್ನು ಜಾರಿಗೊಳಿಸಲಾಗುವುದು. ನಾಮನಿರ್ದೇಶನವನ್ನು ಸಲ್ಲಿಸುವ ಕೊನೆಯ ದಿನಾಂಕ ಜನವರಿ 10 ರವರೆಗೆ ನಡೆಯಲಿದೆ. ನಾಮ ನಿರ್ದೇಶನಗಳ  ಪರಿಶೀಲನೆ ದಿನಾಂಕ ಜನವರಿ 11 ರಂದು ನಡೆಯಲಿದೆ, ಮತ್ತು ಅಭ್ಯರ್ಥಿಗಳು ನಾಮ ನಿರ್ದ್ಸೆಶನದ  ಅರ್ಜಿಯನ್ನು  ಹಿಂತೆಗೆದುಕೊಳ್ಳ ಜನವರಿ 15 ಕೊನೆಯ ದಿನಾಂಕವಾಗಿರುತ್ತದೆ ಎಂದು ಆಯೋಗ ತಿಳಿಸಿದೆ.


ಎಲ್ಲಾ ಮತದಾನ ಕೇಂದ್ರಗಳಲ್ಲಿ ಇವಿಎಂಗಳು (ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು) ಮತ್ತು ವಿ.ವಿ.ಪಿ.ಟಿ.ಎಸ್ (ವೋಟರ್-ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್) ಅನ್ನು ಬಳಸಲಾಗುವುದು ಎಂದು ಆಯೋಗ ಹೇಳಿದೆ. ಮತ ಎಣಿಕೆಯ ಕಾರ್ಯ  ಫೆಬ್ರವರಿ 1 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.