ನವದೆಹಲಿ: ಪೌರತ್ವ ಕೇಂದ್ರ ಸರ್ಕಾರದ ವಿಷಯವಾಗಿದ್ದು, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಕಾನೂನುಗಳನ್ನು ಜಾರಿಗೊಳಿಸಲು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ಸದ್ಯ ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳು ಪೌರತ್ವ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ ಹಿನ್ನೆಲೆ ಜಿತೇಂದ್ರ ಸಿಂಗ್ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಿತೇಂದ್ರ ಸಿಂಗ್, "ಕೆಲ ರಾಜ್ಯಗಳು ತಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎನ್ನುತ್ತಿವೆ. ಆದರೆ, ಅವರ ಈ ನಿಲುವು ನನಗೆ ಇನ್ನೂ ಅರ್ಥವಾಗಿಲ್ಲ. ಏಕೆಂದರೆ, ಇದು ಕೇಂದ್ರ ಸರ್ಕಾರದ ವಿಷಯ. ಇದನ್ನು ಜಾರಿಗೊಳಿಸದಂತೆ ತಡೆಯಲು ರಾಜ್ಯಗಳ ಬಳಿ ಯಾವುದೇ ರೀತಿಯ ವಿಶೇಷ ಅಧಿಕಾರವಿದೆ ಎಂಬುದು ಅನಿಸುವುದಿಲ್ಲ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಪೌರತ್ವ ತಿದ್ದುಪಡಿ ಕಾಯ್ದೆ-2019 ಆನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿರುವ ಸಿಂಗ್, "ಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿದೆ. ಕೆಲ ಅನೈತಿಕ ಅಂಶಗಳಿದ್ದು, ಅವು ಕೇವಲ ರಾಜಕೀಯ ನಡೆಸುವ ಉದ್ದೇಶದಿಂದ ಈ ಸ್ಥಿತಿಯ ಲಾಭ ಪಡೆಯಬಯಸುತ್ತಿವೆ ಹಾಗೂ ಇದರಲ್ಲಿ ಕಾಂಗ್ರೆಸ್ ಕೈವಾಡವಿದೆ" ಎಂದು ಅವರು ಆರೋಪಿಸಿದ್ದಾರೆ.


ಡಿಸೆಂಬರ್ 12 ರಂದು ಈ ಕಾಯ್ದೆಗೆ ಪ್ರತಿಕ್ರಿಯಿಸಿದ್ದ ಪಂಜಾಬ್ ಮುಖ್ಯಮಂತ್ರಿ ಇದೊಂದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಇದನ್ನು ನಾವು ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮೊದಲ ಬಾರಿಗೆ ಹೇಳಿದ್ದರು. ಪಶ್ಚಿಮ ಬಂಗಾಳ ಸರ್ಕಾರ NRC ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಈ ಕಾಯ್ದೆಗಳನ್ನು ವಿರೋಧಿಸುವ ಸರ್ಕಾರಗಳು ಒಗ್ಗೂಡಲು ಕರೆ ನೀಡಿದೆ. ಕೇರಳದ ಮುಖ್ಯಮಂತ್ರಿಗಳೂ ಕೂಡ ಇದೆ ರೀತಿಯ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರು ಕೂಡ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.


ಪೌರತ್ವ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಮುಂದುವರೆದ ಪ್ರತಿಭಟನೆ
ಪೌರತ್ವ (ತಿದ್ದುಪಡಿ) ಕಾಯ್ದೆ-2019 ಅನ್ನು ವಿರೋಧಿಸಿ ಪೂರ್ವೋತ್ತರ ರಾಜ್ಯಗಳು ಹಾಗೂ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಪಶ್ಚಿಮ ಬಂಗಾಳದ 6 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ NRC ವಿರೋಧಿಸಿ ನಡೆಸಲಾಗಿರುವ ಹಿಂಸಾಚಾರದ ಬೈಕ ಈ ಆದೇಶ ನೀಡಲಾಗಿದೆ. ಗುವಾಹಾಟಿ ಹಾಗೂ ದಿಬ್ರುಗಡ ಜಿಲ್ಲೆಗಳಲ್ಲಿ ಕರ್ಫ್ಯೂನಲ್ಲಿ ಸಡಿಲಿಕೆ ನೀಡಲಾಗಿದ್ದರೂ ಕೂಡ ಇಂಟರ್ನೆಟ್ ಸೇವೆ ಮೇಲಿನ ನಿಷೇಧ ಮುಂದುವರೆಸಲಾಗಿದೆ. ಈ ಕಾಯ್ದೆಗೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನ್ಯೂ ಫ್ರೆಂಡ್ಸ್ ಕಾಲೋನಿ, ಭರತ್ ನಗರ್ ಹಾಗೂ ಮಥುರಾ ರೋಡ ಮೇಲೆ ಬೆಂಕಿ ಹಚ್ಚಲಾಗಿದ್ದು, ಈ ಬೆಂಕಿಯಲ್ಲಿ ಮೂರು ಬಸ್ ಗಳು ಭಸ್ಮವಾಗಿವೆ.