CAA-NRC ಕಾಯ್ದೆಗಳಿಗೆ ವಿರೋಧ: ಶಾ-ಮೋದಿ ವಿರುದ್ಧ ಧ್ವನಿ ಎತ್ತಲು ಒವೈಸಿ ಕರೆ
ಈ ಕುರಿತು ಮಾತನಾಡಿರುವ ಒವೈಸಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧ್ವನಿ ಎತ್ತುವವರನ್ನು `ಮರ್ದ್ ಎ-ಮುಜಾಹೀದ್ ಎಂದು ಕರೆಯಲಾಗುವುದು ಎಂದಿದ್ದಾರೆ.
ನವದೆಹಲಿ:ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ, ತಾವು ಗುಂಡಿಗೆ ಎದೆ ನೀಡಲು ಸಿದ್ಧ ಆದರೆ, ದಾಖಲೆಗಳನ್ನು ತೋರಿಸುವುದಿಲ್ಲ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಧ್ವನಿ ಎತ್ತುವವರನ್ನು 'ಮರ್ದ್ ಎ ಮುಜಾಹೀದ್' ಎಂದು ಕರೆಯಲಾಗುವುದು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಒವೈಸಿ, "ಮೋದಿ-ಶಾ ವಿರುದ್ಧ ಧ್ವನಿ ಎತ್ತುವವರನ್ನು ನಿಜಾರ್ಥದಲ್ಲಿ 'ಮರ್ದ್ ಎ-ಮುಜಾಹೀದ್' ಎಂದು ಕರೆಯಲಾಗುವುದು. ನಾನು ಇದೆ ದೇಶದಲ್ಲಿರುವೆ ಆದರೆ, ದಾಖಲೆ ತೋರಿಸುವುದಿಲ್ಲ. ಒಂದು ವೇಳೆ ದಾಖಲೆ ತೋರಿಸುವುದು ಅನಿವಾರ್ಯವಾದಲ್ಲಿ ಎದೆಯ ಮೇಲೆ ಗುಂಡು ಸಹಿಸಿಕೊಳ್ಳಲು ಸಿದ್ಧ. ನನ್ನ ಹೃದಯಕ್ಕೆ ಗುಂಡು ಹೊಡೆಯಿರಿ ಏಕೆಂದರೆ ಹೃದಯದಲ್ಲಿ ಭಾರತದ ಪ್ರತಿ ಅಪಾರ ಪ್ರೀತಿ ಇದೆ" ಎಂದಿದ್ದಾರೆ.
ಅಸದುದ್ದೀನ್ ಒವೈಸಿ ಅವರ ಪಕ್ಷ AIMIM ಲೋಕಸಭೆಯಲ್ಲಿ CAA ಹಾಗೂ NRC ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಭಾರತೀಯ ಜನತಾ ಪಕ್ಧದ ಮುಖ್ಯಸ್ಥ ಅನುರಾಗ್ ಠಾಕೂರ್ ಅವರನ್ನು ಗುರಿಯಾಗಿಸಿ ಮಾತನಾಡಿದ್ದ ಒವೈಸಿ, "ದೇಶದ ಯಾವುದೇ ಮೂಲೆಯಲ್ಲಿ ಒಂದು ಸ್ಥಳ ನಿಗದಿಪಡಿಸಿ ನಾನು ಅಲ್ಲಿಗೆ ಬಂದು ನಿಮ್ಮ ಗುಂಡನ್ನು ಎದುರಿಸಲು ಸಿದ್ಧನಿದ್ದೇನೆ" ಎಂದು ಅನುರಾಗ್ ಠಾಕೂರ್ ಅವರಿಗೆ ಸವಾಲೆಸಗಿದ್ದರು.
"ನಾನು ನಿಮ್ಮ ಹೇಳಿಕೆಗಳಿಗೆ ನಾವು ಹೆದರುವುದಿಲ್ಲ. ಕಾರಣ ನಮ್ಮ ತಾಯಂದಿರರು ಹಾಗೂ ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ದೇಶವನ್ನು ರಕ್ಷಿಸುವ ನಿರ್ಣಯ ಕೈಗೊಂಡಿದ್ದಾರೆ" ಎಂದು ಒವೈಸಿ ಹೇಳಿದ್ದಾರೆ. ದೆಹಲಿ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ BJP ಅಭ್ಯರ್ಥಿ ಮನೀಶ್ ಚೌಧರಿ ಬೆಂಬಲಿಸಿ ಮಾಡಿದ ಭಾಷಣದ ವೇಳೆ ಅನುರಾಗ್ ಠಾಕೂರ್ "ದೇಶದ್ರೋಹಿಗಳನ್ನು ಗುಂಡಿಕ್ಕಿ..#@*#' ಎಂಬ ಹೇಳಿಕೆ ನೀಡಿದ್ದರು.