ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಹಾಗೂ ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ಕುರಿತು ಮುಂಬೈನ ಠಾಣೆಯಲ್ಲಿ ಮಾತನಾಡಿರುವ ಮಹಾರಾಷ್ಟ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ NCP ಮುಖಂಡ ಜೀತೇಂದ್ರ ಅಹ್ವಾಡ್, ಈ ಕಾನೂನುಗಳು ಕೇವಲ ಮುಸ್ಲಿಮರಿಗೆ ಮಾತ್ರ ವಿರೋಧಿಯಾಗಿಲ್ಲ. ಮುಸ್ಲಿಮರು ಹೇಗಾದರೂ ಮಾಡಿ ತಮ್ಮ ಪೂರ್ವಜರ ಗೋರಿಗಳನ್ನು ತೋರಿಸಬಹುದು, ಆದರೆ, ಯಾವುದೇ ಒಬ್ಬ ಹಿಂದೂ ತನ್ನ ಮುತ್ತಾತನ ಅಂತ್ಯಸಂಸ್ಕಾರ ಎಲ್ಲಿ ನಡೆಯಿತು ಎಂಬುದನ್ನು ಹೇಗೆ ಸಿದ್ಧಪಡಿಸಬಲ್ಲ?"  ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಮಂತ್ರಿಯಾಗಿರುವ ಜೀತೇಂದ್ರ ಅಹ್ವಾಡ್, "ಈ ಕಾನೂನುಗಳು ಮುಸ್ಲಿಮರ ಪಾಲಿಗೆ ಎಷ್ಟು ಮಾರಕವಾಗಿವೆಯೋ ಅಷ್ಟೇ ಮಾರಕ 5 ಸಾವಿರ ವರ್ಷಗಳಿಂದ ನೀವು ವಂಚಿಸಿದ ಜನರ ಪಾಲಿಗೆ ಕೂಡ ಆಗಿರಲಿವೆ" ಎಂದಿದ್ದಾರೆ.


ಮಹಾರಾಷ್ಟ್ರ ರಾಜ್ಯದಲ್ಲಿ CAA ಜಾರಿಗೊಳಿಸಲು ಬಿಡುವುದಿಲ್ಲ
ಇದಕ್ಕೂ ಮೊದಲು ಮಾತನಾಡಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, BJPಯನ್ನು ತಡೆಯಲು ನಾವು ರಾಜ್ಯಸರ್ಕಾರದಲ್ಲಿ ಒಂದಾಗಿದ್ದೇವೆ. ಎಲ್ಲಿಯವರೆಗೆ ನಾವು ಸರ್ಕಾರದಲ್ಲಿರಲಿವೆ ಅಲ್ಲಿಯವರೆಗೆ ನಾವು CAA ಅನ್ನು ನಾವು ರಾಜ್ಯದಲ್ಲಿ ಜಾರಿಗೊಳಿಸು ಬಿಡುವುದಿಲ್ಲ. ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಸಂವಿಧಾನದ ವಿರುದ್ಧ ಯಾವ ಸರ್ಕಾರವನ್ನೂ ಸಹ ನಾವು ಮುಂದೆ ಹೋಗಲು ಬಿಡುವುದಿಲ್ಲ. ನಮ್ಮ ದೇಶ ಜಾತ್ಯಾತೀತ ದೇಶವಾಗಿದ್ದು, ನಮ್ಮ ದೇಶದ ಕಾನೂನುಗಳು ಸಂವಿಧಾನದ ಅನುಗುಣವಾಗಿರಬೇಕು ಎಂದು ಹೇಳಿದ್ದರು.


ಹೊಸ ಕಾನೂನಿಗೆ ವಿರೋಧ
ಇದುವರೆಗೆ ಕೇರಳ ಹಾಗೂ ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ರಾಜ್ಯದ ಸರ್ಕಾರಗಳು CAA ಅನ್ನು ವಿರೋಧಿಸಿ ನಿಲುವು ಕೈಗೊಂಡಿವೆ. ಅಷ್ಟೇ ಅಲ್ಲ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕೂಡ ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಲು ಬಿಡುವುದಿಲ್ಲ ಎಂದಿದೆ.


ಈ ಕಾನೂನಿನಲ್ಲಿ ಅಂತಹದ್ದೇನಿದೆ?
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ ಹಾಗೂ ಪಾರಸಿ ಸಮುದಾಯದ ಜನರಿಗೆ ಭಾರತೀಯ ನಾಗರಿಕತ್ವ ನೀಡುವ ಕುರಿತು ಉಲ್ಲೇಖಿಸಲಾಗಿದೆ. ಡಿಸೆಂಬರ್ 31, 2014 ಅಥವಾ ಅದಕ್ಕಿಂತ ಮುಂಚಿತವಾಗಿ ಈ ಮೂರು ದೇಶಗಳಿಂದ ಭಾರತಕ್ಕೆ ಶರಣಾರ್ಥಿಗಳಾಗಿ ಪ್ರವೇಶಿಸಿರುವ ಮುಸ್ಲಿಮೇತರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿದೆ.


ಜನವರಿ 10, 2020ರಂದು ಜಾರಿಗೆ ಬಂದಿತ್ತು ಈ ಕಾನೂನು
ಈ ವಿವಾದಾತ್ಮಕ ಕಾನೂನು ಪೌರತ್ವ ಕಾಯ್ದೆ-1955ರ ತಿದ್ದುಪಡಿ ರೂಪವಾಗಿದೆ. ಡಿಸೆಂಬರ್ 11, 2019 ರಲ್ಲಿ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದು, ಜನವರಿ 10ಕ್ಕೆ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿದೆ. ಕೇಂದ್ರ ಗೃಹ ಸಚಿವಾಲಯ ಗೆಜೆಟ್ ನಲ್ಲಿ ಅಧಿಸೂಚನೆ ಜಾರಿಗೊಳಿಸುವ ಮೂಲಕ ಇದನ್ನು ಪ್ರಕಟಿಸಿತ್ತು.