CAA Protest: 14 ಮೆಟ್ರೋ ನಿಲ್ದಾಣಗಳು ಬಂದ್
ವಿವಿಧ ಸ್ಥಳಗಳಲ್ಲಿನ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ 14 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿದೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಲವೆಡೆ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಾಳಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ(CAA) ವಿರುದ್ಧದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಮೊದಲಿಗೆ 8 ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಯಿತು, ನಂತರ ಇನ್ನೂ 6 ನಿಲ್ದಾಣಗಳನ್ನು ಮುಚ್ಚಲಾಯಿತು. ದೆಹಲಿಯಾದ್ಯಂತ ಒಟ್ಟು 14 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ದೆಹಲಿ ಮೆಟ್ರೋ ರೈಲು ನಿಗಮ ಬಿಡುಗಡೆ ಮಾಡಿದ ಭದ್ರತಾ ನವೀಕರಣದ ಪ್ರಕಾರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜಸೋಲಾ ವಿಹಾರ್, ಶಾಹೀನ್ ಬಾಗ್ ಮತ್ತು ಮುನಿರ್ಕಾ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಲಾಗಿದ್ದು, ಈ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.
ಅದೇ ಸಮಯದಲ್ಲಿ, ಕೆಂಪು ಕೋಟೆ, ಜಮಾ ಮಸೀದಿ, ಚಾಂದನಿ ಚೌಕ್ ಮತ್ತು ವಿಶ್ವವಿದ್ಯಾಲಯ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.
ಪಟೇಲ್ ಚೌಕ್, ಲೋಕ ಕಲ್ಯಾಣ್ ಮಾರ್ಗ, ಉದ್ಯೋಗ್ ಭವನ, ಐಟಿಒ, ಪ್ರಗತಿ ಮೈದಾನ ಮತ್ತು ಖಾನ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಈ ನಿಲ್ದಾಣಗಳಲ್ಲಿಯೂ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ ಎಂದು ಹೇಳಲಾಗಿದೆ.