CAA PROTEST: ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಟಿಪ್ಪಣಿ ಮಾಡಿದ ಖ್ಯಾತ ಲೇಖಕ
ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಭಟನಾಕಾರರನ್ನು ಬೆಂಬಲಿಸಲು ಬಂದ ಖ್ಯಾತ ಲೇಖಕ ತಪನ್ ಘೋಷ್ ಭಾರತೀಯ ಸೇನೆಯ ಕುರಿತು ವಿವಾದಾತ್ಮಕ ಟಿಪ್ಪಣಿ ಮಾಡಿದ್ದಾರೆ.
ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ ಬಳಿಕ ಇದೀಗ ಜಂತರ್ ಮಂತರ್ ನಲ್ಲಿಯೂ ಕೂಡ ಇದೀಗ ಪ್ರತಿಭಟನೆ ಆರಂಭವಾಗಿದೆ. ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಬೆಂಬಲಿಸಲು ಬಂದ ಖ್ಯಾತ ಲೇಖಕ ತಪನ್ ಘೋಷ್, ಭಾರತೀಯ ಸೇನೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ತಪನ್ ಘೋಷ್, " ಭಾರತೀಯ ಸೇನೆ ದೇಶದ ನಾಗರಿಕರನ್ನು ಹತ್ಯೆ ಮಾಡುತ್ತದೆ. ಪಾಕಿಸ್ತಾನ ನಮ್ಮ ಶತ್ರು ಅಲ್ಲ. ಗೋರಕ್ಷಕರು ನಿಜಾರ್ಥದಲ್ಲಿ ಉಗ್ರವಾದಿಗಳಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ದೆಹಲಿಯ ಶಾಹೀನ್ ಬಾಗ್ ನಲ್ಲಿ ಒಂದುಗೂಡಿರುವ ಪ್ರತಿಭಟನಾಕಾರರು ಕಳೆದ ಒಂದು ತಿಂಗಳಿನಿಂದ CAA ಅನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿಯೂ ಕೂಡ ಜನರು CAA ಅನ್ನು ವಿರುಧಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.
ತಮಗೆ ಒಪ್ಪಿಗೆ ಇಲ್ಲದಿದ್ದರೂ ಕೂಡ ಕೇರಳದಲ್ಲಿ CAA ವಿರೋಧಿಸಿ ಹೇಳಿಕೆ ನೀಡಿದ್ದಾರೆ ಕೇರಳದ ರಾಜ್ಯಪಾಲರು
ಕೇರಳದ ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಅಧಿವೆಶದನ ಆರಂಭಕ್ಕೂ ಮೊದಲು ಸದನವನ್ನು ಉದ್ದೇಶಿಸಿ ಮಾತನಾಡಿರುವ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, CAA ವಿರುದ್ಧ ಸರ್ಕಾರ ಕೈಗೊಂಡಿರುವ ನಿರ್ಣಯ ತಮಗೆ ಒಪ್ಪಿಗೆ ಇಲ್ಲದಿದ್ದರೂ ಕೂಡ ಸರ್ಕಾರ ನೀಡಿರುವ ಹೇಳಿಕೆಯನ್ನು ಓದುತ್ತಿರುವುದಾಗಿ ಹೇಳಿದ್ದಾರೆ.
CAA ಅನ್ನು ವಿರೋಧಿಸುತ್ತಿರುವ ಕೇರಳದ ಪಿನರಾಯಿ ವಿಜಯನ್ ಸರ್ಕಾರದ ಪತ್ರವನ್ನು ಸದನದಲ್ಲಿ ಓದುವುದಕ್ಕೂ ಮುನ್ನ ಮಾತನಾಡಿರುವ ರಾಜ್ಯಪಾಲರು, "ಪತ್ರ ಓದುವುದಕ್ಕೂ ಮುನ್ನ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ನನ್ನದೇ ಆದ ಆಲೋಚನೆ ಇದೆ. ಆದರೆ, ಇದು ಸರ್ಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮದ ಭಾಗವಲ್ಲ. ನಾನು ಮುಖ್ಯಮಂತ್ರಿಗಳ ಇಚ್ಛೆಯನ್ನು ಗೌರವಿಸುತ್ತೇನೆ. ಆದರೆ, ಅವರ ಇಚ್ಛೆಗೆ ತಮ್ಮ ಒಪ್ಪಿಗೆ ಇಲ್ಲ. ಆದರೂ, ಸಹಿತ ತಾವು ಈ ಪತ್ರ ಓದುತ್ತಿರುವೇನು" ಎಂದು ಹೇಳಿದ್ದರೆ.
ರಾಜ್ಯಾಪಾಲರ ಭಾಷಣವನ್ನು ಬಹಿಷ್ಕರಿಸಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿಥಲಾ, "ತಮಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ಬಗ್ಗೆ ನಾಚಿಕೆಯಾಗುತ್ತದೆ, ತಮ್ಮ ಪತ್ರ ಓದಿಸಲು ಅವರು ರಾಜ್ಯಪಾಲರ ಪಾದಕ್ಕೆ ಎರಗಿದ್ದು, ಇದು ರಾಜ್ಯಪಾಲರ ಹೇಳಿಕೆಯಿಂದ ಸಾಬೀತಾಗುತ್ತದೆ" ಎಂದಿದ್ದಾರೆ.
ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಘೋಷಣೆಗಳನ್ನು ಕೂಗಿ ರಾಜ್ಯಪಾಲರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಬಳಿಕ ಮಾರ್ಷಲ್ ಗಳ ನೆರವಿನೊಂದಿಗೆ ರಾಜ್ಯಪಾಲರು ಭಾಷಣ ಮಾಡಲು ವೇದಿಕೆಯ ಮೇಲೆ ಆಗಮಿಸಿದ್ದಾರೆ.