ನವದೆಹಲಿ: ಸರ್ಕಾರದ ಅನುಮೋದನೆಯೊಂದಿಗೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 26% ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.


COMMERCIAL BREAK
SCROLL TO CONTINUE READING

ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ 26% ಎಫ್‌ಡಿಐಗೆ ಅವಕಾಶವಿದೆ ಮತ್ತು ವಿಷಯ ಸೇವೆಗಳನ್ನು ಪ್ರಸಾರ ಮಾಡಲು 49% ಎಫ್‌ಡಿಐಗೆ ಅನುಮತಿ ಇದೆ ಎಂದು ಸರ್ಕಾರ ತಿಳಿಸಿದೆ.


ಅಸ್ತಿತ್ವದಲ್ಲಿರುವ ಎಫ್‌ಡಿಐ ನೀತಿಯು ಪ್ರಸ್ತುತ 'ನ್ಯೂಸ್ & ಕರೆಂಟ್ ಅಫೇರ್ಸ್' ಟಿವಿ ಚಾನೆಲ್‌ಗಳ ಅಪ್-ಲಿಂಕ್‌ನಲ್ಲಿ ಅನುಮೋದನೆ ಮಾರ್ಗದಲ್ಲಿ ಶೇ 49 ರಷ್ಟು ಎಫ್‌ಡಿಐಗೆ ಅವಕಾಶ ನೀಡುತ್ತದೆ. ಈಗ ಮುದ್ರಣ ಮಾಧ್ಯಮದ ಮಾರ್ಗದಲ್ಲಿ ಡಿಜಿಟಲ್ ಮೀಡಿಯಾ ಮೂಲಕ ಸುದ್ದಿ ಮತ್ತು ಕರೆಂಟ್ ಅಫೇರ್ಸ್ ನ್ನು ಅಪ್ಲೋಡ್ / ಸ್ಟ್ರೀಮಿಂಗ್ ಮಾಡಲು ಸರ್ಕಾರಿ ಮಾರ್ಗದಲ್ಲಿ ಶೇ 26% ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ.


ಸದ್ಯ ಭಾರತದಲ್ಲಿ ಡಿಜಿಟಲ್ ಮೀಡಿಯಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಈ ವಲಯವು 2019 ರಲ್ಲಿ ಚಲನಚಿತ್ರ ಮನರಂಜನೆಯನ್ನು ಹಾಗೂ 2021ರ ವೇಳೆಗೆ ಮುದ್ರಣ ಮಾಧ್ಯಮವನ್ನು ಹಿಂದಿಕ್ಕುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.