ನವದೆಹಲಿ: ಯುನಿವರ್ಸಲ್ ಬೇಸಿಕ್ ಇನ್ಕಮ್ (ಯುಬಿಐ) ಅನ್ನು ಸರ್ಕಾರದ ಪರವಾಗಿ ಕಾರ್ಯಗತಗೊಳಿಸುವ ಬಗ್ಗೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ. ಯುಬಿಐ ಕ್ಯಾಬಿನೆಟ್ನಿಂದ ಅನುಮೋದನೆ ಪಡೆದರೆ 2019 ರ ಸಾರ್ವತ್ರಿಕ ಚುನಾವಣೆಗಳ ಮೊದಲು ಸಾರ್ವಜನಿಕರಿಗೆ ದೊಡ್ಡ ಉಡುಗೊರೆ ಸಿಗಲಿದೆ.  ಒಂದು ವೇಳೆ UBI ಜಾರಿಗೊಂಡಿದ್ದೆಯಾದರೆ ಅದು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯ ಮಾದರಿಗಳನ್ನು ಗುರುವಾರ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಮಧ್ಯಂತರ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ:
ಯೋಜನೆಯನ್ನು ಯಾವಾಗ ಮತ್ತು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬಹುದು. ಮಧ್ಯಂತರ ಬಜೆಟ್ನಲ್ಲಿ ಅದರ ನೀಲನಕ್ಷೆಯನ್ನು ಪ್ರಸ್ತುತಪಡಿಸಬಹುದೆಂಬ ನಿರೀಕ್ಷೆಯಿದೆ. ಚುನಾವಣೆಗೆ ಮುಂಚಿತವಾಗಿ ಸರ್ಕಾರ ಇದನ್ನು ಘೋಷಿಸಬಹುದು. ರೈತರು ಈ ಯೋಜನೆಯಲ್ಲಿ ಕೃಷಿ ಸಚಿವಾಲಯದಿಂದ ಮಾಹಿತಿ ಪಡೆಯಲು ಬಯಸುತ್ತಾರೆ. ಇದಲ್ಲದೆ, ಎಲ್ಲಾ ಸಚಿವಾಲಯಗಳಿಂದ ರೈತರಿಗೆ ಮಾತ್ರವೇ ಅನುಷ್ಠಾನಗೊಳಿಸಬೇಕೋ ಅಥವಾ ಎಲ್ಲರನ್ನು (ನಿರುದ್ಯೋಗಿ ಮತ್ತು ರೈತರನ್ನು) ಇದರ ವ್ಯಾಪ್ತಿಗೆ ಹೇಗೆ ತರಬೇಕು ಎಂದು ಕೇಳಲಾಗಿದೆ. ಇದಕ್ಕಾಗಿ ಸರಕಾರವು ಸಮಿತಿಯನ್ನೂ ರಚಿಸಬಹುದು.


ಏನಿದು ಯುನಿವರ್ಸಲ್ ಬೇಸಿಕ್ ಇನ್ಕಮ್?
ಸರ್ಕಾರದ ಪರವಾಗಿ ಸಾರ್ವತ್ರಿಕವಾದ ಮೂಲ ಆದಾಯದ (ಯುಬಿಐ) ಯೋಜನೆಯ ಉಡುಗೊರೆ ಸಾರ್ವಜನಿಕರಿಗೆ ನೀಡಿದರೆ, ದೇಶದ ಪ್ರತಿ ಪ್ರಜೆಯ ಖಾತೆಗೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ.  ಇದು ಮೂಲಭೂತ ಅಗತ್ಯಗಳನ್ನು ಪೂರೈಸಲು ಅವರಿಗೆ ಸಹಾಯ ಮಾಡುತ್ತದೆ. ಸರ್ಕಾರವು ಈ ಯೋಜನೆಗಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದೆ. ದೇಶದ 20 ಮಿಲಿಯನ್ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ 2019 ರ ಮಧ್ಯಂತರ ಬಜೆಟ್ನಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಸ್ಕೀಮ್ ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸುವ ನಿರೀಕ್ಷೆಯಿದೆ.