ನವದೆಹಲಿ: ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಭ್ಯರ್ಥಿಯಾಗಿ ಯೋಧ ತೇಜ್ ಬಹದೂರ್ ಯಾದವ್ ನಾಮಪತ್ರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಅವರು ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದರು.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿಯವರನ್ನು ಸುಲಭವಾಗಿ ಗೆಲ್ಲಿಸುವ ನಿಟ್ಟಿನಲ್ಲಿ ತಮ್ಮ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ ಎಂದು ತೇಜ್ ಬಹದೂರ್ ಆರೋಪಿಸಿದ್ದರು.


"ನನ್ನ ನಾಮ ಪತ್ರವನ್ನು ತಪ್ಪಾಗಿ ರದ್ದುಗೊಳಿಸಲಾಗಿದೆ. ನನಗೆ ಮಂಗಳವಾರ 6.15 ಸಾಯಂಕಾಲ ಕೆಲವು ಪುರಾವೆಗಳನ್ನು ಸಲ್ಲಿಸಲು ಕೇಳಲಾಗಿತ್ತು.ಆದರೆ ಆ ಎಲ್ಲ ಪುರಾವೆಗಳನ್ನು ಸಲ್ಲಿಸಿದಾಗಲು ಕೂಡ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದ್ದರಿಂದ ಇದನ್ನು ಪ್ರಶ್ನಿಸಿ ನಾನು ಸುಪ್ರೀಂಕೋರ್ಟ್ ಗೆ ಹೋಗುತ್ತೇನೆ "ಎಂದು ಯಾದವ್ ತಿಳಿಸಿದ್ದರು.


ಈಗ ಅವರ ದೂರನ್ನು ಆಲಿಸಿದ ಸುಪ್ರೀಂಕೋರ್ಟ್ ನಾಳೆಯೊಳಗೆ ತೇಜ್ ಬಹದೂರ್ ಅವರ ಅರ್ಜಿಯನ್ನು ನಾಳೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.


ತೇಜ್ ಬಹದೂರ್ ಯಾದವ್ ಜನವರಿ 2017 ಯಲ್ಲಿ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕಿಸ್ತಾನದ ಗಡಿಯುದ್ದಕ್ಕೂ ಸೈನಿಕರಿಗೆ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ  ಸಾಮಾಜಿಕ ಮಾಧ್ಯಮದಲ್ಲಿ ನಾಲ್ಕು ವೀಡಿಯೊಗಳನ್ನು ಪೋಸ್ಟ್ ಮಾಡಿದ ಬಳಿಕ ಬೆಳಕಿಗೆ ಬಂದಿದ್ದರು.