ನವದೆಹಲಿ: ಮುಂಬೈನಲ್ಲಿ ಬುಧವಾರ ಮಾಧ್ಯಮಗೋಷ್ಠಿಯ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ರಾಷ್ಟ್ರಗೀತೆಗೆ ಅಗೌರವ (Disrespecting the national anthem) ತೋರಿದ ಆರೋಪದ ಮೇಲೆ ಬಿಜೆಪಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಮಮತಾ ಕುಳಿತ ಜಾಗದಲ್ಲಿ ಒಮ್ಮಿಂದೊಮ್ಮೆಲೆ ರಾಷ್ಟ್ರಗೀತೆಯನ್ನು ಹೇಳಲು ಶುರು ಮಾಡುತ್ತಾರೆ. ರಾಷ್ಟ್ರಗೀತೆ (national anthem) ಹೇಳುತ್ತಾ ಮಧ್ಯದಲ್ಲಿಯೇ ಎದ್ದು ನಿಲ್ಲುತ್ತಾರೆ. ಮತ್ತೆ ರಾಷ್ಟ್ರಗೀತೆಯನ್ನು ಥಟ್ಟನೆ ಅರ್ಧಕ್ಕೆ ಮುಗಿಸುತ್ತಾರೆ. 


ಮುಂಬೈ ಬಿಜೆಪಿಯ ನಾಯಕರೊಬ್ಬರು  (Mumbai BJP leader) ಬ್ಯಾನರ್ಜಿ ವಿರುದ್ಧ "ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವವನ್ನು ತೋರಿಸಿದ್ದಾರೆ" ಎಂದು ಆರೋಪಿಸಿ ದೂರು (Case registered against Mamata) ದಾಖಲಿಸಿದ್ದಾರೆ. 


ಬುಧವಾರ, ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ, ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಚರ್ಚೆ ಮಾಡಿದರು.


ಬಳಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು. ಆದರೆ ಮಧ್ಯದಲ್ಲಿ ನಿಲ್ಲಿಸಿ "ಜೈ ಮಹಾರಾಷ್ಟ್ರ" ಎಂದು ಹೇಳಿ ಮುಗಿಸಿದರು. ಇಂದು ಮುಖ್ಯಮಂತ್ರಿಯಾಗಿ ಅವರು ಬಂಗಾಳದ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ದೇಶವನ್ನು ಅವಮಾನಿಸಿದ್ದಾರೆ." ಎಂದು ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕವು (West Bengal BJP) ಬ್ಯಾನರ್ಜಿ ರಾಷ್ಟ್ರಗೀತೆಯನ್ನು ಹಾಡುತ್ತಿರುವ 16 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದೆ. 


 



 


ಬಿಜೆಪಿ ಪಶ್ಚಿಮ ಬಂಗಾಳದ ಅಧ್ಯಕ್ಷ ಡಾ.ಸುಕಾಂತ ಮಜುಂದಾರ್,  "ಬಂಗಾಳ ಸಿಎಂ ಮಮತಾ (Mamata Banerjee)ಅವರು ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿದ್ದು, ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಅವರಿಗೆ ಸರಿಯಾದ ರಾಷ್ಟ್ರಗೀತೆ ಶಿಷ್ಟಾಚಾರ ತಿಳಿದಿಲ್ಲವೇ ಅಥವಾ ತಿಳಿದೂ ಅವಮಾನಿಸುತ್ತಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.


ಮಹಾರಾಷ್ಟ್ರದ ಬಿಜೆಪಿ ನಾಯಕ ಪ್ರತೀಕ್ ಕರ್ಪೆ, "ಇದು ರಾಷ್ಟ್ರಗೀತೆಗೆ ಅಗೌಅರವ ಅಲ್ಲವೇ? ಸಿಎಂ ಮಮತಾ ಕುಳಿತ ಭಂಗಿಯಲ್ಲಿ ರಾಷ್ಟ್ರಗೀತೆ ಆರಂಭಿಸಿದಾಗ ಅಲ್ಲಿದ್ದ ಬುದ್ಧಿಜೀವಿಗಳು ಏನು ಮಾಡುತ್ತಿದ್ದರು?"  ಎಂದಿದ್ದಾರೆ.


ಈ ಘಟನೆಯ ಬಗ್ಗೆ ಟಿಎಂಸಿಯ (TMC) ಯಾವೊಬ್ಬ ನಾಯಕರೂ ಈವರೆಗೆ ಪ್ರತಿಕ್ರಿಯಿಸಿಲ್ಲ.