ಹೈದರಾಬಾದ್: 9.45 ಕೋಟಿ ರೂ. ನಗದು, 3.73 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 9.15 ಲಕ್ಷ ಮೌಲ್ಯದ ಚಿನ್ನ, 135 ಲೀಟರ್ ಮದ್ಯ, 40 ಕೆಜಿ ಗಾಂಜಾ ಮತ್ತು 11 ಚೀಲ ಗುಟ್ಕಾವನ್ನು ಹೈದರಾಬಾದ್ ಪೊಲೀಸರು ಈ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರ, ಬಂಜಾರ ಹಿಲ್ಸ್ ಎಸಿಪಿ ಕೆ.ಎಸ್. ರಾವ್ ಮತ್ತು ಅವರ ತಂಡ ಖಚಿತ ಮಾಹಿತಿ ಆಧಾರದ ಮೇಲ್ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಝಹೀರಾ ನಗರದಲ್ಲಿ ಒಂದು ಕೋಟಿ ರೂ. ಮತ್ತು ದಿವ್ಯಶಕ್ತಿ ಕಾಂಪ್ಲೆಕ್ಸ್ ನಲ್ಲಿ  3.80 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.


ಹೈದರಾಬಾದ್ ಪೊಲೀಸ್ ಕಮೀಷನರ್ ಅಂಜನಿ ಕುಮಾರ್ ಮಾಧ್ಯಮದೊಂದಿಗೆ ಮಾತನಾಡುತ್ತಾ, 9.45 ಕೋಟಿ ರೂ. ನಗದು, 9 ಲಕ್ಷ ಮೌಲ್ಯದ ಚಿನ್ನ, 135 ಲೀಟರ್ ಆಲ್ಕೊಹಾಲ್ ಮತ್ತು 40 ಕೆಜಿ ಗಾಂಜಾವನ್ನು ಈ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದೇವೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದ್ದು, ತನಿಖೆ ಪ್ರಕ್ರಿಯೆಯಲ್ಲಿದೆ. ತೆಲಂಗಾಣ ಜನರು ಈ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ನೆರವಾದರು ಎಂದು ಅಂಜನಿ ಕುಮಾರ್ ತಿಳಿಸಿದ್ದಾರೆ.


ತೆಲಂಗಾಣದಲ್ಲಿ ಎಪ್ರಿಲ್ 11ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.