ಚೆನ್ನೈ: ಜಾತಿ ರಾಜಕೀಯವು ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಅಡ್ಡಗೊಲಾಗಿದೆ ಎಂದು ನಟ ಕಮಲ್ ಹಾಸನ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ತಮಿಳ್ ಪತ್ರಿಕೆ ಆನಂದ ವಿಕಾತನ್ ಗೆ ನೀಡಿರುವ ಸಂದರ್ಶನದಲ್ಲಿ ಹಾಸನ್ ಅವರು ಜಾತಿ ಪರಿಕಲ್ಪನೆಯನ್ನು ಚುನಾವಣಾ ಲಾಭಗಳು ಮತ್ತು ಪ್ರಯೋಜನಗಳಿಗಾಗಿ ಜೀವಂತವಾಗಿರಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ತಮ್ಮ ರಾಜಕೀಯ ಅನುಕೂಲಕ್ಕಾಗಿ  ಎಲ್ಲರು ಜಾತಿಯನ್ನು ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಹಾಸನ್ ತಿಳಿಸಿದ್ದಾರೆ. ಆದ್ದರಿಂದ ರೈತರು ಮತ್ತು ವಿದ್ಯಾರ್ಥಿಗಳಿಗೆ ಜಾತಿಯು ಅತಿ ದೊಡ್ಡ ಶತ್ರುವಾಗಿದೆ ಎಂದು ತಿಳಿಸಿದರು.


ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕ ಶೌಚಾಲಯಗಳು ಮುಚ್ಚಿಹೋಗಿವೆ. ಸರ್ಕಾರವು ಇವುಗಳ ನಿರ್ಮಾಣಕ್ಕಾಗಿ ಯೋಜನೆಗಳನ್ನು ಪ್ರಕಟಿಸಿದ್ದರೂ ಕೂಡ ಪ್ರತ್ಯೇಕ ಶೌಚಾಲಯಗಳನ್ನು ಇನ್ನೂ ನಿರ್ಮಿಸಿಲ್ಲ ಎಂದು ಹಾಸನ್ ತಿಳಿಸಿದರು. ಕೃಷಿಯನ್ನು ಕೂಡ  ಸರ್ಕಾರ ಕಡೆಗಣಿಸಿದೆ ಎಂದು ಅವರು ಆರೋಪಿಸಿದರು.