ಕಾವೇರಿ ನಿರ್ವಹಣಾ ಮಂಡಳಿ: ಭರ್ಜರಿ ಬಿರಿಯಾನಿ ತಿಂದು ಎಐಎಡಿಎಂಕೆ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ
ಮಾಧ್ಯಮ ಕ್ಯಾಮೆರಾಗಳಲ್ಲಿ, ಎಐಎಡಿಎಂಕೆ ಕಾರ್ಯಕರ್ತರು ಬಿರಿಯಾನಿ ಹಾಗೂ ಮಧ್ಯಪಾನ ಸೇವಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಚೆನ್ನೈ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ, ಸತ್ಯಾಗ್ರಹ ನಡೆಯುತ್ತಿವೆ. ಆದರೆ ಕಾವೇರಿ ಮ್ಯಾನೇಜ್ಮೆಂಟ್ ಬೋರ್ಡ್ ಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಡಳಿತ ಪಕ್ಷ ಎಐಎಡಿಎಂಕೆ ಕಾರ್ಯಕರ್ತರು ವೇದಿಕೆ ಹಿಂದೆ ಸಾಗಿ ಭರ್ಜರಿ ಬಿರಿಯಾನಿ ತಿಂದು, ಕಂಠಪೂರ್ತಿ ಕುಡಿಯುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.
ಈ ಉಪವಾಸ ಸತ್ಯಾಗ್ರಹಗಳು ಮತ್ತು ಪ್ರತಿಭಟನೆಗಳು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತವೆ. ಆದರೆ ಉಪವಾಸ ಸತ್ಯಾಗ್ರಹ ಎಂದು ಹೇಳಿ ಕೊಯಮತ್ತೂರಿನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಜಾಗದಲ್ಲಿ ಕಾರ್ಯಕರ್ತರು ವೇದಿಕೆ ಹಿಂದೆ ಸಾಗಿ ಬಿರಿಯಾನಿ ತಿನ್ನುತ್ತಿರುವುದು ಹಾಗೂ ವೆಲ್ಲೂರು, ಸೇಲಂ ಗಳಲ್ಲಿ ಕೆಲವರು ಪಕ್ಕದಲ್ಲೇ ಇದ್ದ ಮಧ್ಯಪಾನದ ಅಂಗಡಿಗೆ ಸಾಗಿ ಮಧ್ಯ ಸೇವಿಸುತ್ತಿರುವ ದೃಶ್ಯ ಈಗ ಎಲ್ಲೆಡೆ ಹರಿದಾಡುತ್ತಿವೆ.
ಇನ್ನು ವಿರೋಧ ಪಕ್ಷವಾದ ಡಿಎಂಕೆ ನಾಳೆ(ಗುರುವಾರ) ತಮಿಳುನಾಡು ಬಂದ್ ಗೆ ಕರೆ ನೀಡಿದೆ.