ನವದೆಹಲಿ: ಗುರುವಾರದಂದು  ಪುದುಚೇರಿ ಸರ್ಕಾರವು ಕಾವೇರಿ ನೀರಿನ ತೀರ್ಪನ್ನು ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಇದೆ ಏಪ್ರಿಲ್ 2 ರಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್  ಕಿರಣ್ ಬೇಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾವೇರಿ ವಿವಾದಕ್ಕೆ ಅಂತ್ಯಹಾಡಲು ಒತ್ತಾಯಿಸಿದ್ದಾರೆ.


ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಾವೇರಿ ಮ್ಯಾನೇಜ್ಮೆಂಟ್ ಬೋರ್ಡ್ (ಸಿಎಂಬಿ) ಮತ್ತು ಕಾವೇರಿ ವಾಟರ್ ರೆಗ್ಯುಲೇಶನ್ ಕಮಿಟಿಯನ್ನು (ಸಿಡಬ್ಲ್ಯೂಆರ್ಸಿ) ರಚಿಸಲು ಪ್ರಧಾನಮಂತ್ರಿಗಳು ಸಂಬಂಧಿಸಿದ ಸಚಿವಾಲಯಕ್ಕೆ ನಿರ್ದೇಶನ ನೀಡಲು ಒತ್ತಾಯಿಸಿದ್ದಾರೆ.


16/02/2018 ರಂದು ಸುಪ್ರೀಂ ಕೋರ್ಟ್  ಸುಪ್ರಿಂ ಕೋರ್ಟ್ ನ ತೀರ್ಪಿನ ಅನ್ವಯ  ಪುದುಚೆರಿಗೆ 7 ಟಿಎಂಸಿ  ನೀರಿನ ಪ್ರಮಾಣ ಬಿಡುಗಡೆ ಮಾಡುವ ಕುರಿತಾಗಿ ತೀರ್ಪಿನಲ್ಲಿ ಧೃಡಪಡಿಸಿದೆ. ಆದ್ದರಿಂದ ಇದನ್ನು ಕಾರ್ಯಗತಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.