ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ವಿಭಾಗ CBDT ಇನ್ಕಮ್ ಟ್ಯಾಕ್ಸ್ ರಿಟರ್ನ್ ಭರ್ತಿ ಮಾಡಲು ನೂತನ ಫಾರ್ಮ್ ವೊಂದನ್ನು ಬಿಡುಗಡೆಗೊಳಿಸಿದೆ. ಹೀಗಾಗಿ ಈ ವರ್ಷ ನೀವು ನಿಮ್ಮ ಇನ್ಕಮ್ ಟ್ಯಾಕ್ಸ್ ಭರ್ತಿ ಮಾಡುವಾಗ ಈ ರಿವೈಸ್ಡ್ ಫಾರ್ಮ್ ಭರ್ತಿ ಮಾಡುವ ಅವಶ್ಯಕತೆ ಇದೆ.


COMMERCIAL BREAK
SCROLL TO CONTINUE READING

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ತೆರಿಗೆ ಪಾವತಿದಾರರಿಗೆ ಹಲವು ಲಾಭಗಳನ್ನು ನೀಡಲು ಜೂನ್ 20, 2020ರವರೆಗೆ ವಿಸ್ತರಿಸಲಾಗಿದ್ದೆ, ಈ ನೂತನ ಫಾರ್ ಬಿಡುಗಡೆಯ ಹಿಂದಿನ ಉದ್ದೇಶ ಎನ್ನಲಾಗಿದೆ.


ಈ ನೂತನ ಫಾರ್ಮ್ ನಲ್ಲಿ ತೆರಿಗೆ ಪಾವತಿದಾರರು ಹೆಚ್ಚೂವರಿಯಾಗಿ ಸಿಕ್ಕ ಅವಧಿಯಲ್ಲಿ ಮಾಡಲಾಗಿರುವ ಹೂಡಿಕೆ ಹಾಗೂ ವಿನಾಯ್ತಿ ಕುರಿತು ಮಾಹಿತಿ ನೀಡಬಹುದಾಗಿದೆ. ಈ ಫಾರ್ಮ್ 2019-20ರ ಆರ್ಥಿಕ ವರ್ಷದಲ್ಲಿ ತೆರಿಗೆ ಪಾವತಿಗಾಗಿ ಬಳಸಲಾಗುವುದು.


ಪ್ರತಿ ವರ್ಷ ಏಪ್ರಿಲ್ 1ರವರೆಗೆ ಸರ್ಕಾರ ತೆರಿಗೆ ಪಾವತಿಸಲು ತನ್ನ ಅಧಿಸೂಚನೆ ಜಾರಿಗೊಳಿಸುತ್ತದೆ. ಈ ಬಾರಿಯೂ ಕೂಡ ಸೆಂಟ್ರಲ್ ಬೋರ್ಡ್ ಆಫ್ ಇನ್ಕಮ್ ಟ್ಯಾಕ್ಸ್ (CBDT) ಈ ಕುರಿತಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆ ಇನ್ಕಮ್ ಟ್ಯಾಕ್ಸ್ ಕಾಯ್ದೆಯಡಿ ಹಲವು ಕಾರ್ಯಗಳಿಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ.


ಉದಾಹರಣೆಗೆ ಈ ವರ್ಷ (2019-20) ಹೂಡಿಕೆಗಾಗಿ ಮಾರ್ಚ್ 31, 2020 ಅಂತಿಮ ತಿಥಿಯ ಬದಲಾಗಿ ಜೂನ್ 30, 2020 ತಿಥಿಯಾಗಿರಲಿದೆ. ಇದೇ ರೀತಿ ಜೂನ್ 30, 2020 ಅಥವಾ ಅದರೊಳಗೆ ಯಾವುದೇ ಪಾಲಸಿಯಲ್ಲಿ ಮಾಡಲಾಗಿರುವ ಹೂಡಿಕೆಯನ್ನು ಕೂಡ 80D, 80C,80G ಅಡಿ  ತೆರಿಗೆ ವಿನಾಯ್ತಿಗಾಗಿ ಪರಿಗಣಿಸಲಾಗುವುದು.


LIC, PPF, NSC ಗಳಲ್ಲಿನ ಹೂಡಿಕೆಯಿಂದ 80C ಅಡಿ ತೆರಿಗೆ ವಿನಾಯ್ತಿ ಪಡೆಯಬಹುದು. ವೈದ್ಯಕೀಯ ಚಿಕಿತ್ಸೆಯಲ್ಲಿ ಖರ್ಚನ್ನು ತೋರಿಸಿ ನೀವು 80D ಅಡಿ ವಿನಾಯ್ತಿ ಪಡೆಯಬಹುದು. ಇದೆ ರೀತಿ ಯಾವುದೇ ಏಜೆನ್ಸಿ, ಟ್ರಸ್ಟ್, ಧಾರ್ಮಿಕ ಸಂಸ್ಥೆಗಳಿಗೆ ಡೊನೇಷನ್ ನೀಡುವ ಮೂಲಕ 80G ಅಡಿ ತೆರಿಗೆ ವಿನಾಯ್ತಿ ಪಡೆಯಬಹುದು.


ಕ್ಯಾಪಿಟಲ್ ಗೆನ್ ಅಡಿ ರೋಲ್ ಓವರ್ ಬೆನಿಫಿಟ್ ಪಡೆಯಲು ಮಾಡಲಾಗಿರುವ ಹೂಡಿಕೆ, ಕಟ್ಟಡ ನಿರ್ಮಾಣ ಅಥವಾ ಖರೀದಿಯ ಅವಧಿಯನ್ನೂ ಸಹ ಜೂನ್ 30ಕ್ಕೆ ನಿಗದಿಪಡಿಸಲಾಗಿದೆ (ಸೆಕ್ಷನ್ 54 GB ಅಡಿಯಲ್ಲಿ ನೀವು ವಿನಾಯ್ತಿ ಪಡೆಯಬಹುದು).


ಈ ನೂತನ ಬದಲಾವಣೆಗಳು ಮೇ 31ರಿಂದ ತೆರಿಗೆ ಪಾವತಿದಾರರಿಗೆ ಲಭ್ಯವಿರಲಿವೆ. ಈ ನೂತನ ಫಾರ್ಮ್ ಗಳಲ್ಲಿ ITR-1(ಸಹಜ) ಹಾಗೂ ITR-2 (ಸುಗಮ) ಕೂಡ ಶಾಮೀಲಾಗಿವೆ.