CBI Missing Gold: CBI ವಶದಲ್ಲಿದ್ದ 45 ಕೋಟಿ ರೂ.ಮೌಲ್ಯದ Gold ಮಾಯ, 103 ಕೆ.ಜಿ ಚಿನ್ನ ಸಿಗುತ್ತಿಲ್ಲವಂತೆ
CBI Missing Gold: ಗಟ್ಟಿ ಹಾಗೂ ಆಭರಣದ ರೂಪದಲ್ಲಿ ಮಾಯವಾಗಿರುವ 103 ಕೆ.ಜಿ ಚಿನ್ನ, 400.47 ಕಿಲೋಗ್ರಾಮ್ ಚಿನ್ನದ ಭಾಗವಾಗಿದ್ದು, ಇದನ್ನು ಸಿಬಿಐ ಅಧಿಕಾರಿಗಳು ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ಕಚೇರಿಯ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದರು.
CBI Missing Gold:ಜೈಲಿನಿಂದ ಖೈದಿಗಳು ಪರಾರಿಯಾಗುವ ಘಟನೆಗಳು ನೀವು ಸಾಮಾನ್ಯವಾಗಿ ಕೇಳಿರಬಹುದು, ಆದರೆ ಇಂದು ಪ್ರಕಟಗೊಂಡಿರುವ ಆಘಾತಕಾರಿ ಘಟನೆ ಕೇಳಿದರೆ ನೀವೂ ಕೂಡ ಬೆಚ್ಚಿಬೀಳುವಿರಿ. ಭಾರತದ ಸರ್ವೋನ್ನತ ತನಿಖಾ ಸಂಸ್ಥೆ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ನಂತಹ ಸುರಕ್ಷಿತ ಸಂಸ್ಥೆಯ ವಶದಿಂದ ಯಾರೋ 45 ಕೋಟಿ ರೂ. ಮೌಲ್ಯದ ಚಿನ್ನವನ್ನು ಮಾಯ ಮಾಡಿದ್ದಾರೆ. ಹೌದು, ನಂಬಲು ಅಸಾಧ್ಯ ಎನಿಸಿದರೂ ಕೂಡ ಇದು ಸತ್ಯ. ಕೇಂದ್ರ ತನಿಖಾ ದಳದ ಸುರಕ್ಷಿತ ವಶದಲ್ಲಿದ್ದ 103 ಕೆಜಿ ಚಿನ್ನ ಕಾಣೆಯಾಗಿದೆ. ಸಿಬಿಐ 2012 ರಲ್ಲಿ ಈ ಚಿನ್ನವನ್ನು ಚೆನ್ನೈನ ಅಕ್ರಮ ಆಮದುಮಾಡಿಕೊಳ್ಳುವರಿಂದ ಈ ಚಿನ್ನವನ್ನು ವಶಕ್ಕೆ ಪಡೆದಿತ್ತು.
ಇದನ್ನು ಓದಿ- ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ 1.7 ಕೆಜಿ ಚಿನ್ನದ ನಾಣ್ಯಗಳ ಪತ್ತೆ
SP ದರ್ಜೆಯ ಅಧಿಕಾರಿಗಳು ಇದರ ತನಿಖೆ ನಡೆಸಲಿದ್ದಾರೆಗಟ್ಟಿ ಹಾಗೂ ಆಭರಣದ ರೂಪದಲ್ಲಿ ಮಾಯವಾಗಿರುವ 103 ಕೆ.ಜಿ ಚಿನ್ನ, 400.47 ಕಿಲೋಗ್ರಾಮ್ ಚಿನ್ನದ ಭಾಗವಾಗಿದ್ದು, ಇದನ್ನು ಸಿಬಿಐ ಅಧಿಕಾರಿಗಳು ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ಕಚೇರಿಯ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಕ್ರೈಂ ಬ್ರ್ಯಾಂಚ್-CID ಪೊಲೀಸರಿಗೆ ಪ್ರಕರಣದ ತನಿಖೆ ನಡೆಸಲು ಆದೇಶಿಸಿದೆ. SP ದರ್ಜೆಯ ಅಧಿಕಾರಿಗಳು ಈ ತನಿಖೆ ನಡೆಸಲಿದ್ದು, ಆರು ತಿಂಗಳುಗಳ ವರೆಗೆ ತನಿಖೆ ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಬ್ಯಾಂಕ್ ಲಾಕರ್ ನಲ್ಲಿಟ್ಟ Gold ಕಳುವಾದರೆ ಪರಿಹಾರ ಸಿಗುತ್ತಾ? ನಿಯಮ ಏನು ಹೇಳುತ್ತೆ?
ಏನಿದು ಪ್ರಕರಣ?
ವರ್ಷ 2021ರಲ್ಲಿ ಸಿಬಿಐ ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ನ ಕಚೇರಿ ಮೇಲೆ ದಾಳಿ ನಡೆಸಿ 400.47 ಕೆ.ಜಿ ಚಿನ್ನವನ್ನು ಜಪ್ತಿ ಮಾಡಿತ್ತು. ಈ ವೇಳೆ ಸಿಬಿಐ ಚಿನ್ನವನ್ನು ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ನ ಲಾಕರ್ ಗಳನ್ನು ವಾಲ್ಟ್ ಗಳಲ್ಲಿ ಇರಿಸಿತ್ತು. ಆದರೆ, ಸಿಬಿಐ ಕಸ್ಟಡಿಯಲ್ಲಿ ಇದನ್ನು ಲಾಕ್ ಹಾಗೂ ಸೀಲ್ ಮಾಡಿ ಇರಿಸಲಾಗಿತ್ತು. ಆ ವೇಳೆ ಅದರ ಒಟ್ಟು ತೂಕ 400.47 ಕಿ.ಗ್ರಾಂ ಗಳಷ್ಟಿತ್ತು. ಆದರೆ ಇತ್ತೀಚಿಗೆ ಈ ಲಾಕ್ ಹಾಗೂ ಸೀಲ್ ಅನ್ನು ತೆರೆದಾಗ 103 Kg ಚಿನ್ನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.