ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ಇತರ 30 ಆರೋಪಿಗಳ ವಿರುದ್ಧದ ಮೇವು ಹಗರಣದ ನಾಲ್ಕನೇ ಪ್ರಕರಣದ ತೀರ್ಪನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.  


COMMERCIAL BREAK
SCROLL TO CONTINUE READING

ಲಾಲೂ ಪ್ರಸಾದ್ ಯಾದವ್ ಅವರು ಶನಿವಾರ ಜೈಲಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ರಾಜೇಂದ್ರ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಮಾ.17 ರಂದೇ ನೀಡಬೇಕಿದ್ದ ತೀರ್ಪನ್ನು ಮಾ.19ಕ್ಕೆ ಮುಂದೂಡಿತ್ತು. 


ಲಾಲೂ ಮೇವು ಹಗರಣದ ನಾಲ್ಕನೆ ಪ್ರಕರಣ ಯಾವುದು?


ಈಗಾಗಲೇ ಆರ್ ಜೆಡಿ ಮುಖಂಡ ಲಾಲೂ ಅವರನ್ನು ಮೇವು ಹಗರಣದ ಮೂರು ಆರೋಪಗಳಲ್ಲಿ ದೋಷಿ ಎಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೂರು ಪ್ರಕರಣಗಳಿಂದ ಒಟ್ಟು 13.5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೀಗ ನಾಲ್ಕನೇ ಪ್ರಕರಣವು ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದುಮ್ಕಾ ಖಜಾನೆಯಲ್ಲಿ ನಡೆದ 3.13 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದ್ದು, ಈ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. 


ಮೇವು ನುಂಗಿದ ಲಾಲುಗೆ ಮೇವು ಹಾಕೋ ಶಿಕ್ಷೆ!


1990 ರಲ್ಲಿ ಲಾಲೂ ಪ್ರಸಾದ್‌ ಯಾದವ್‌ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೇವು ಹಗರಣ ನಡೆದಿತ್ತು. ಸದ್ಯ ಲಾಲೂ ಪ್ರಸಾದ್ ಯಾದವ್ ಅವರು ಬಿರ್ಸಾ ಮುಂಡಾ ಕೇಂದ್ರಿಯ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.