ನವದೆಹಲಿ: CBSE 10th And 12th Exam Updates - CBSE 10ನೇ ಮತ್ತು 12ನೇ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಸಿಬಿಎಸ್ಇ 2022 ರ 10ನೇ ಮತ್ತು 12ನೇ Academic Session ಅನ್ನು ಶೇ. 50- ಶೇ. 50 ಸಿಲೆಬಸ್ ಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಮೊದಲ ಪರೀಕ್ಷೆ ನವೆಂಬರ್-ಡಿಸೆಂಬರ್ ನಲ್ಲಿ ನಡೆದರೆ ಎರಡನೇ ಸೆಶನ್ ಮಾರ್ಚ್ ಹಾಗೂ ಎಪ್ರಿಲ್ ನಲ್ಲಿ ನಡೆಯಲಿದೆ.


ಕೇಂದ್ರ ಸರ್ಕಾರದ ಡಿಜಿಟಲ್ ಏಕಸ್ವಾಮ್ಯ ನಿಗ್ರಹದ ಸಮಿತಿಗೆ ಸೇರಲಿರುವ ನಂದನ್ ನಿಲೇಕಣಿ


COMMERCIAL BREAK
SCROLL TO CONTINUE READING

ಪ್ರತಿಯೊಂದು ಟರ್ಮ್ ಕೊನೆಯಲ್ಲಿ ಪರೀಕ್ಷೆ ನಡೆಯಲಿವೆ
ಈ ಕುರಿತು ಮಾಹಿತಿ ನೀಡಿರುವ ಸಿಬಿಎಸ್‌ಇ ನಿರ್ದೇಶಕ (Teaching) ಜೋಸೆಫ್ ಎಮ್ಯಾನುಯೆಲ್,  "2021-22ರ ಶೈಕ್ಷಣಿಕ ಅಧಿವೇಶನದ ಪಠ್ಯಕ್ರಮವನ್ನು ಎರಡು ಅಧಿವೇಶನಗಳಲ್ಲಿ ವಿಂಗಡಿಸಲಾಗುವುದು ಮತ್ತು ಇದಕ್ಕಾಗಿ ವಿಷಯ ತಜ್ಞರ ಸಹಾಯವನ್ನು ಪಡೆಯಲಾಗುವುದು. ಮಂಡಳಿಯು ಪ್ರತಿ ಅಧಿವೇಶನದ ಆಧಾರದ ಮೇಲೆ ಕೊನೆಯಲ್ಲಿ ಪರೀಕ್ಷೆ ನಡೆಸಲಿದೆ. 10 ಮತ್ತು 12 ನೇ ಪರೀಕ್ಷೆಗಳನ್ನು ನಡೆಸುವ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ- ಅವ್ಯಾಚವಾಗಿ ಮಹಾರಾಷ್ಟ್ರದ ಸ್ಪೀಕರ್ ನಿಂದಿಸಿದ್ದಕ್ಕೆ 12 ಬಿಜೆಪಿ ಶಾಸಕರ ಅಮಾನತು


ಕೊವಿಡ್ ಕಾರಣ ಜಾರಿತರಲಾಗುತ್ತಿದೆ ಈ ನೀತಿ
ಬೋರ್ಡ್ ಪರೀಕ್ಷೆ 2021-22ರ ಪಠ್ಯಕ್ರಮವನ್ನು ಜುಲೈ 2021 ರಲ್ಲಿ ಅಧಿಸೂಚಿಸಲಾದ ಅಂತಿಮ ಶೈಕ್ಷಣಿಕ ಅಧಿವೇಶನಕ್ಕೆ ಅನುಗುಣವಾಗಿ ಮಾಡಲಾಗುವುದು. ಆಂತರಿಕ ಗುರುತು, ಪ್ರಾಯೋಗಿಕ, ಯೋಜನಾ ಕಾರ್ಯವನ್ನು ಹೆಚ್ಚು ವಿಶ್ವಾಸಾರ್ಹವಾಗಿಸಲು ಮತ್ತು ಮಾರ್ಗಸೂಚಿಗಳ ಪ್ರಕಾರ ಪ್ರಯತ್ನಿಸಲಾಗುವುದು ಎಂದು ಇಮ್ಯಾನುಯೆಲ್ ಹೇಳಿದ್ದಾರೆ. ನ್ಯಾಯಯುತ ರೀತಿಯಲ್ಲಿ ನಂಬರ್ ನೀಡಲು ಮಂಡಳಿ ವತಿಯಿಂದ ನೀತಿಯನ್ನು ಪ್ರಕಟಿಸಲಾಗುವುದು. 'ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆಯನ್ನು ಮಂಡಳಿಯು ತಂದಿದೆ, ಕೊವಿಡ್ (Covid-19 Pandemic) ಮಹಾಮಾರಿಯ ಕಾರಣ ಕಳೆದ ವರ್ಷ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.


ಇದನ್ನೂ ಓದಿ-ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಪುತ್ರ ಅಭಿಜಿತ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.