CBSE 12th Board:12ನೇ ತರಗತಿಯ ಮೌಲ್ಯಮಾಪನ ಹೇಗಿರಲಿದೆ? CBSE ಸಿದ್ಧಪಡಿಸಿದೆ ಈ ಸ್ಪೆಷಲ್ ಪ್ಲಾನ್ !
CBSE 12th Board: ಕೊರೊನಾ ಮಹಾಮಾರಿಯ ಹಿನ್ನೆಲೆ ಈ ವರ್ಷ ರದ್ದಾಗಿರುವ 12ನೇ ತರಗತಿಯ CBSE 12ನೇ ತರಗತಿಯ ಮೌಲ್ಯಮಾಪನಕ್ಕಾಗಿ ಮಂಡಳಿ ಮುಖ್ಯ ಪ್ರಸ್ತಾವನೆಯೊಂದರ ಮೇಲೆ ಚಿಂತನೆ ನಡೆಸುತ್ತಿದೆ.
CBSE 12th Board: ಕೊರೊನಾ ಮಹಾಮಾರಿಯ ಹಿನ್ನೆಲೆ ಈ ವರ್ಷ ರದ್ದಾಗಿರುವ 12ನೇ ತರಗತಿಯ CBSE 12ನೇ ತರಗತಿಯ ಮೌಲ್ಯಮಾಪನಕ್ಕಾಗಿ (CBSE 12th Board Evaluation) ಮಂಡಳಿ ಮುಖ್ಯ ಪ್ರಸ್ತಾವನೆಯೊಂದರ ಮೇಲೆ ಚಿಂತನೆ ನಡೆಸುತ್ತಿದೆ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ (CBSE) 12ನೇ ತರಗತಿಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ 12ನೇ ತರಗತಿಯ ಮೊದಲು ನಡೆದ ಬೋರ್ಡ್ ಪರೀಕ್ಷೆ ಅಂದರೆ, 10ನೇ ತರಗತಿ, 11ನೇ ತರಗತಿ ಹಾಗೂ 12ನೇ ತರಗತಿಯ ಪ್ರೀಬೋರ್ಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸುವ ಸಾಧ್ಯತೆ ಇದೆ.
Evaluation Process Of CBSE Board 2021 - ಶಿಕ್ಷಣ ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ CBSE ಮಂಡಳಿಯ ವತಿಯಿಂದ ರಚಿಸಲಾಗಿರುವ 12 ಸದಸ್ಯರ ತಜ್ಞರ ಸಮೀತಿ ಶನಿವಾರ ಜೂನ್ 12ರಂದು ಈ ಆಯ್ಕೆಯ ಕುರಿತು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈಗಾಗಲೇ ಈ ಪದ್ಧತಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತಜ್ಞರಲ್ಲಿ ಒಮ್ಮತ ಮೋಡಿ ಬಂದಿದ್ದು, ಅಂಕಗಳ ಮೇಲೆ ಎಷ್ಟು ವೆಟೆಜ್ ನೀಡಬೇಕು ಎಂಬುದರ ಮೇಲೆ ಇನ್ನೂ ಒಮ್ಮತ ಮೂಡಿಬಂದಿಲ್ಲ ಎಂದು ಮೂಲಗಳು ವರದಿ ಮಾಡಿವೆ. ಈ ಮೂರೂ ಕಂಪೋನೆಂಟ್ ಗಳಿಂದ ಥಿಯರಿಗಾಗಿ 70 ಅಂಕಗಳನ್ನು ಪರಿಗಣಿಸಲಾಗುವುದು ಎನ್ನಲಾಗುತ್ತಿದೆ.
ಇದನ್ನೂ ಓದಿ-Covid-19 Test: ಮದುವೆ ಅಟೆಂಡ್ ಆಗಲೂ ಕೂಡ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿದ ಸರ್ಕಾರ
ಜೂನ್ 1 ರಂದು ರದ್ದಾದ 12ನೇ ತರಗತಿಯ ಪರೀಕ್ಷೆಗಳು (CBSE Class 12 Evaluation Criteria 2021)
ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆಯ ಹಿನ್ನೆಲೆ CBSE 12ನೇ ತರಗತಿಯ ಪರೀಕ್ಷೆಗಳನ್ನು ಜೂನ್ 1, 2021 ರಂದು ರದ್ದುಗೊಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆದ ಸಭೆ ಈ ಕುರಿತು ತೀರ್ಮಾನ ಕೈಗೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆಯಲ್ಲಿ ಶಾಮೀಲಾಗಲು ಬಯಸುವ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎನ್ನಲಾಗಿತ್ತು.
ಇದನ್ನೂ ಓದಿ-Drone Medicine Delivery: ನಿಮ್ಮ ಮನೆ ಬಾಗಿಲಿದೆ ಔಷಧಿ ತಲುಪಿಸಲಿದೆ ಡ್ರೋಣ್!
ಇಂದು ಸುಪ್ರೀಂ ಕೋರ್ಟ್ ನಲ್ಲಿ ತನ್ನ ಪ್ಲಾನ್ ಸಾದರುಪಡಿಸಲಿರುವ CBSE (Evaluation Process Of CBSE)
ಇದಕ್ಕೂ ಮೊದಲು ಈ ಕುರಿತು ಸೂಚನೆ ನೀಡಿದ್ದ ದೇಶದ ಸರ್ವೋಚ್ಛ ನ್ಯಾಯಾಲಯ (Supreme Court), ಎರಡು ವಾರಗಳ ಒಳಗೆ ಒಂದು ಆಲ್ಟರ್ನೇಟಿವ್ ಯೋಜನೆಯನ್ನು ಸಾದರುಪಡಿಸಲು ಮಂಡಳಿಗೆ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಮಂಡಳಿಯ 12 ತಜ್ಞರ ಸಮಿತಿ ಸಭೆ ನಡೆಸಿದೆ. ಹೀಗಾಗಿ ಇಂದು ಅಂದರೆ ಜೂನ್ 14 ರಂದು CBSE ತನ್ನ ಯೋಜನೆಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಿದೆ. ವರದಿಗಳ ಪ್ರಕಾರ ಮಂಡಳಿ ಇಂದೇ ಶಾಲೆಗಳಿಗೆ ಮೌಲ್ಯಮಾಪನದ ಕುರಿತು ನಿರ್ದೇಶನ ನೀಡುವ ಸಾಧ್ಯತೆ ಕೂಡ ಇದ್ದು, ವಿದ್ಯಾರ್ಥಿಗಳಿಗೆ ಅವರ ಕಳೆದ ಮೂರು ವರ್ಷಗಳ ಪರ್ಫಾರ್ಮೆನ್ಸ್ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Chinaದಲ್ಲಿ ನೂತನ ಕೊರೊನಾ ರೂಪಾಂತರಿಯ ಆತಂಕ, ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.