CBSE 12th Practical Exam Date: ಸಿಬಿಎಸ್ಇ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಘೋಷಣೆ
CBSE 12th Practical Exam 2021 Date Sheet: ಸಿಬಿಎಸ್ಇ 12ನೇ ತರಗತಿಗಾಗಿ ನಡೆಯುವ ಪ್ರ್ಯಾಕ್ಟಿಕಲ್ ಡೇಟ್ ಶೀಟ್ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಇದೀಗ ಪ್ರಾಯೋಗಿಕ ಪರೀಕ್ಷೆಗಳ ದಿನಾಂಕವನ್ನು ಸಿಬಿಎಸ್ಇ ಅಧಿಕೃತ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು.
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2020-21ರ ಶೈಕ್ಷಣಿಕ ವರ್ಷದ 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಬಿಡುಗಡೆ ಮಾಡಿದೆ. ಈ ವರ್ಷ 12 ನೇ ತರಗತಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು. ಅವರು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಪರಿಶೀಲಿಸಬಹುದು. ಸಿಬಿಎಸ್‌ಇ 12 ನೇ ತರಗತಿ ಪ್ರಾಯೋಗಿಕ ಪರೀಕ್ಷೆಯು 1 ಜನವರಿ 2021 ರಿಂದ 8 ಫೆಬ್ರವರಿ 2021 ರವರೆಗೆ ನಡೆಯಲಿದೆ. ಈ ದಿನಾಂಕ ಸಂಭವನೀಯ ದಿನಾಂಕ ಎಂದು ಸಿಬಿಎಸ್‌ಇ ಹೇಳಿದೆ. ನಿಖರವಾದ ದಿನಾಂಕವನ್ನು ನಂತರ ಪ್ರತ್ಯೇಕವಾಗಿ ನೀಡಲಾಗುವುದು ಎಂದು ತಿಳಿಸಿದೆ. ಪ್ರಾಯೋಗಿಕ ಪರೀಕ್ಷೆಯ ದಿನಾಂಕದ ಜೊತೆಗೆ ಪರೀಕ್ಷೆಯ ಆಯೋಜನೆಗೆ ಸಂಬಂಧಿಸಿದಂತೆ ಸಿಬಿಎಸ್‌ಇ ಮಂಡಳಿಯು ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ಸಹ ಬಿಡುಗಡೆ ಮಾಡಿದೆ.
ಇದನ್ನು ಓದಿ- Big News: ನಿಗದಿತ ಸಮಯಕ್ಕೆ ನಡೆಯಲಿವೆ 10 ಮತ್ತು 12ನೆ ತರಗತಿಯ ಪರೀಕ್ಷೆಗಳು-CBSE
ಪ್ರಾಯೋಗಿಕ ಪರೀಕ್ಷೆಗೆ ವಿವಿಧ ದಿನಾಂಕಗಳನ್ನು ಶಾಲೆಗಳಿಗೆ ಕಳುಹಿಸಲಾಗುವುದು ಎಂದು ಸಿಬಿಎಸ್‌ಇ ಮಂಡಳಿ ತಿಳಿಸಿದೆ. ಪ್ರಾಯೋಗಿಕ ಪರೀಕ್ಷೆ ಮತ್ತು ಪ್ರಾಜೆಕ್ಟ್ ಮೌಲ್ಯಮಾಪನವನ್ನು ನೋಡಿಕೊಳ್ಳುವ ವೀಕ್ಷಕರನ್ನು ಸಹ ಮಂಡಳಿ ನೇಮಿಸಿದೆ. ಕಳೆದ ವರ್ಷದಂತೆ, ಈ ವರ್ಷವೂ ಸಿಬಿಎಸ್‌ಇ ಮಂಡಳಿಯು ಪ್ರಾಯೋಗಿಕ ಪರೀಕ್ಷೆಯಲ್ಲಿ ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳಿಗೆ ಪರೀಕ್ಷಕರನ್ನು ನೇಮಿಸಲಿದೆ. ಮಂಡಳಿಯಿಂದ ನೇಮಿಸಲ್ಪಟ್ಟ ಬಾಹ್ಯ ಪರೀಕ್ಷಕರ ಮೂಲಕ ಮಾತ್ರ ಪರೀಕ್ಷೆಯನ್ನು ನಡೆಸುವುದು ಎಲ್ಲಾ ಶಾಲೆಗಳ ಜವಾಬ್ದಾರಿಯಾಗಿದೆ.
ಇದನ್ನು ಓದಿ- CBSE ಬೋರ್ಡ್ ಪರೀಕ್ಷೆಯ ಪಠ್ಯ ಕಡಿಮೆಯಾಗುವ ನಿರೀಕ್ಷೆ, ಪರೀಕ್ಷೆಗಳು ಯಾವಾಗ ಇಲ್ಲಿದೆ ಮಾಹಿತಿ
ಮೌಲ್ಯಮಾಪನ ಮುಗಿದ ನಂತರ, ಶಾಲೆಗಳು ಮಂಡಳಿಯು ಒದಗಿಸಿದ ಲಿಂಕ್‌ನಲ್ಲಿ ಅಂಕಗಳನ್ನು ಅಪ್‌ಲೋಡ್ ಮಾಡಬೇಕು. ಆಯಾ ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಮತ್ತು ಪ್ರಾಜೆಕ್ಟ್ ಮೌಲ್ಯಮಾಪನ ಕಾರ್ಯಗಳನ್ನು ನಡೆಸಲಾಗುವುದು.
ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳ ಭಾವಚಿತ್ರ ಕಡ್ಡಾಯ
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರೀಯ ಮಂಡಳಿ, ಎಲ್ಲ ಶಾಲೆಗಳಿಗೆ ಆಪ್ ಲಿಂಕ್ ವೊಂದನ್ನು ಜಾರಿಗೊಳಿಸಲಾಗುವುದು. ಈ ಲಿಂಕ್ ನಲ್ಲಿ ಶಾಲೆಯ ಆಡಳಿತ ಮಂಡಳಿ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವ ಪ್ರತಿ ಬ್ಯಾಚ್ ನ ಪ್ರತಿಯೊಂದು ವಿದ್ಯಾರ್ಥಿಗಳ ಭಾವಚಿತ್ರ, ಎಕ್ಸ್ಟರ್ನಲ್ ಎಕ್ಸಾಮಿನರ್, ಇಂಟರ್ನಲ್ ಎಕ್ಸಾಮಿನರ್ ಹಾಗೂ ಒಬ್ಸರ್ವರ್ ಜೊತೆಗೆ ಗ್ರೂಪ್ ಫೋಟೋ ಆಪ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಭಾವಚಿತ್ರದಲ್ಲಿ ಎಲ್ಲರ ಮುಖ ಸ್ಪಷ್ಟವಾಗಿ ಗೋಚರಿಸುತ್ತಿರಬೇಕು ಎನ್ನಲಾಗಿದೆ.
ಇದನ್ನು ಓದಿ-10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ, CBSE ಹೊರಡಿಸಿದೆ ಈ ನೋಟೀಸ್
ಶೀಘ್ರವೆ ಜಾರಿಯಾಗಲಿವೆ 10 ಮತ್ತು 12ನೇ ತರಗತಿಗಳ ಪರೀಕ್ಷೆಯ ದಿನಾಂಕ ಪಟ್ಟಿ
ಈ ಕುರಿತು ಅಸೋಚಾಮ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಬಿಎಸ್ಇ ಬೋರ್ಡ್ ಸಚಿವ ಅನುರಾಗ್ ತ್ರಿಪಾಠಿ, "10 ಮತ್ತು 12ನೇ ತರಗತಿಯ ಪರೀಕ್ಷೆಗಳು ನಿಗದಿತ ಅವಧಿಯಲ್ಲಿಯೇ ನಡೆಯಲಿದ್ದು, ಶೀಘ್ರವೇ ಪರೀಕ್ಷಾ ವೇಳಾಪಟ್ಟಿಯನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದರು.