CBSE Board Exams 2021: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಸಿಬಿಎಸ್‌ಇ ಮಂಡಳಿ ಪರೀಕ್ಷೆ 2021ಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಟ್ವೀಟ್ ಮೂಲಕ ನೀಡಿದ್ದಾರೆ. 2021 ರ ಬೋರ್ಡ್ ಪರೀಕ್ಷೆಗಳು ಯಾವ ದಿನಾಂಕದಿಂದ ಪ್ರಾರಂಭವಾಗಲಿವೆ ಎಂದು ಡಿಸೆಂಬರ್ 31, 2020 ರಂದು ಸ್ಪಷ್ಟಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಬೋರ್ಡ್ ಪರೀಕ್ಷೆಯ ದಿನಾಂಕಗಳ ಪ್ರಕಟಣೆಗಾಗಿ ವಿದ್ಯಾರ್ಥಿಗಳು ದೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಅವರ ನಿರೀಕ್ಷೆ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ. ಶಿಕ್ಷಣ ಸಚಿವರು ಸಿಬಿಎಸ್‌ಇ ಮಂಡಳಿ ಪರೀಕ್ಷೆಯ ದಿನಾಂಕಗಳನ್ನು 2020 ರ ಕೊನೆಯ ದಿನದಂದು ಪ್ರಕಟಿಸಲಿದ್ದಾರೆ. ಇದರೊಂದಿಗೆ, 2020 ವರ್ಷ ಗತಿಸಿದ ನಂತರ ವಿದ್ಯಾರ್ಥಿಗಳಿಗೆ ಅವರ ಪರೀಕ್ಷೆಗಳು ಯಾವ ತಿಂಗಳು ಮತ್ತು ದಿನಾಂಕಗಳಂದು ಪ್ರಾರಂಭವಾಗಲಿವೆ ಎಂಬುದು ತಿಳಿಯಲಿದೆ. ಇದರ ಆಧಾರದ ಮೇಲೆ, ಅವರು ತಮ್ಮ ಸಿದ್ಧತೆಗಳನ್ನು ಸಹ ಅಂತಿಮಗೊಳಿಸಬಹುದು.


'ಯಾವುದೇ ಬೋರ್ಡ್ ಪರೀಕ್ಷೆಗಳನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸುವುದಿಲ್ಲ'


COMMERCIAL BREAK
SCROLL TO CONTINUE READING

ಇತ್ತೀಚೆಗೆ ನಡೆದ ಶಿಕ್ಷಣ ಸಚಿವರ ವೆಬಿನಾರ್ ನಲ್ಲಿಯೂ ಸಹ ಶಿಕ್ಷಣ ಸಚಿವರು  ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಬಹುದು ಎಂದು ವಿದ್ಯಾರ್ಥಿಗಳು ನಿರೀಕ್ಷಿಸಿದ್ದರು. ಆದರೆ ಅದು ನಡೆಯಲಿಲ್ಲ. ಕಳೆದ ವೆಬ್‌ನಾರ್‌ನಲ್ಲಿ, ಪ್ರಸ್ತುತ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ ತಿಂಗಳಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲ ಎಂಬ ಸಂಕೇತ ಮಾತ್ರ ಅವರು ನೀಡಿದ್ದರು. ಆದರೆ ವಿದ್ಯಾರ್ಥಿಗಳ ನಿರೀಕ್ಷೆಗೆ ಶೀಘ್ರವೇ ತೆರೆಬೀಳಲಿದ್ದು, ಕೆಲವೇ ದಿನಗಳಲ್ಲಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ಚಿತ್ರಣ ಸಂಪೂರ್ಣವಾಗಿ ಸ್ಪಷ್ಟವಾಗಲಿದೆ.


ಇದನ್ನು ಓದಿ- CBSE Exam 2021: ಪರೀಕ್ಷೆ ನಡೆಸುವ ವಿಧಾನದಲ್ಲಿ ಭಾರಿ ಬದಲಾವಣೆ ಸಾಧ್ಯತೆ... ಇಲ್ಲಿದೆ ವಿವರ


ಕೊವಿಡ್-19 ಕಾರಣ ಬದಲಾದ ಶೆಡ್ಯೂಲ್
ಕಳೆದ ವೆಬ್‌ನಾರ್‌ನಲ್ಲಿ, ಫೆಬ್ರವರಿ ತಿಂಗಳಲ್ಲಿ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ ನಂತರ, ದಿನಾಂಕಗಳ ಬಗ್ಗೆ ಸ್ಪಷ್ಟನೆ ನೀಡಲು ಮತ್ತು ನಿಗದಿತ ದಿನಾಂಕ ಪ್ರಕಟಿಸಲು ವಿದ್ಯಾರ್ಥಿಗಳಿಂದ ಭಾರಿ ಆಗ್ರಹ ವ್ಯಕ್ತವಾಗಿತ್ತು. ಪ್ರತಿ ವರ್ಷ ಸಿಬಿಎಸ್‌ಇ (CBSE) ಮಂಡಳಿಯ ಪರೀಕ್ಷೆಗಳು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗುತ್ತವೆ ಆದರೆ ಈ ಬಾರಿ ಕೋವಿಡ್ ಕಾರಣ ಪರಿಸ್ಥಿತಿಗಳು ವಿಭಿನ್ನವಾಗಿವೆ. ವಿದ್ಯಾರ್ಥಿಗಳು ಇತ್ತೀಚಿನ ನವೀಕರಣಗಳ ಬಗ್ಗೆ ನಿಗಾ ಇಡಬೇಕು, ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದರು.


ಇದನ್ನು ಓದಿ- CBSE 12th Practical Exam Date: ಸಿಬಿಎಸ್ಇ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಘೋಷಣೆ


ಇತ್ತೀಚೆಗಷ್ಟೇ ಪರೀಕ್ಷೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ಮಾತ್ರ ನಡೆಸಲಾಗುವುದು ಮತ್ತು ಕೋವಿಡ್ ವಿರುದ್ಧ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಶಿಕ್ಷಕರವರೆಗೆ ಎಲ್ಲರೂ ಕೋವಿಡ್‌ನಿಂದ ರಕ್ಷಣೆಯ ಎಲ್ಲಾ ವಿಧಾನಗಳನ್ನು ಅನುಸರಿಸಲಿದ್ದಾರೆ ಎಂಬುದನ್ನು ತಿಳಿಸಲಾಗಿದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.