ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟಗೊಂಡಿದ್ದು, ತಿರುವನಂತಪುರಂ ಶೇ 98.2ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನಗಳಿಸಿದೆ. ಉಳಿದಂತೆ ಚೆನ್ನೈ  ಶೇ. 92.93, ದೆಹಲಿ ಶೇ. 91.93 ಫಲಿತಾಂಶ ಪಡೆದು ದ್ವಿತೀಯ ಮತ್ತು ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿವೆ. 


COMMERCIAL BREAK
SCROLL TO CONTINUE READING

2019ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು ಶೇ.83.4ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ಪರೀಕ್ಷೆಯಲ್ಲಿ ಇಬ್ಬರು ಟಾಪರ್ ಗಳಾಗಿದ್ದು, ಹನ್ಸಿಕಾ ಶುಕ್ಲಾ ಮತ್ತು ಕರಿಷ್ಮಾ ಅರೋರಾ ಸರಾಸರಿ 500 ಅಂಕಗಳಲ್ಲಿ 499 ಅಂಕ ಗಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.


ಫೆಬ್ರುವರಿ 16ರಿಂದ ನಡೆದಿದ್ದ ಪರೀಕ್ಷೆಯಲ್ಲಿ ಬರೋಬ್ಬರಿ 13 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಮೂರು ವಿದ್ಯಾರ್ಥಿಗಳು ಎರಡನೇ  ರ್‍ಯಾಂಕ್ ಪಡೆದಿದ್ದರೆ, 18 ವಿದ್ಯಾರ್ಥಿಗಳು ಮೂರನೇ ರ್‍ಯಾಂಕ್  ಪಡೆದಿದ್ದಾರೆ. 


ಇದೇ ಮೊದಲ ಬಾರಿಗೆ 12ನೇ ತರಗತಿ ಪರೀಕ್ಷೆ ಮುಗಿದ ಬಳಿಕ ಕೇವಲ 28 ದಿನಗಳಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಸಿಬಿಎಸ್‌ಇ ದಾಖಲೆ ಬರೆದಿದೆ.  ವಿದ್ಯಾರ್ಥಿಗಳು ಸಿಬಿಎಸ್‌ಇ 12ನೇ ತರಗತಿ ಫಲಿತಾಂಶವನ್ನು ಫಲಿತಾಂಶವನ್ನು cbse.nic.in ಮತ್ತು cbseresults.nic.in ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದೆ.